ಗುರುವಾರ , ಜನವರಿ 23, 2020
28 °C

ಷೇರುಪೇಟೆಯಲ್ಲಿ ಖರೀದಿ ಭರಾಟೆ: ಏರಿಕೆ ಕಂಡ ಸಂವೇದಿ ಸೂಚ್ಯಂಕ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಹೂಡಿಕೆದಾರರು ಮೂಲಸೌಕರ್ಯ, ಬ್ಯಾಂಕಿಂಗ್‌ ಮತ್ತು ಇಂಧನ ಷೇರುಗಳ ಖರೀದಿಗೆ ಭಾರಿ ಉತ್ಸಾಹ ತೋರಿದ ಕಾರಣಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 320 ಅಂಶಗಳ ಏರಿಕೆ ದಾಖಲಿಸಿತು.

ಜಾಗತಿಕ ಷೇರುಪೇಟೆಗಳಲ್ಲಿನ ಖರೀದಿ ಭರಾಟೆಯು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲಿಸಿತು. ತಯಾರಿಕಾ ವಲಯದ ಚಟುವಟಿಕೆಗಳು ಡಿಸೆಂಬರ್‌ ತಿಂಗಳಲ್ಲಿ ಸುಧಾರಿಸಿದ್ದರಿಂದ ಹೂಡಿಕೆದಾರರಲ್ಲಿ ಉತ್ಸಾಹ ಗರಿಗೆದರಿದೆ. ₹ 1 ಲಕ್ಷ ಕೋಟಿಗಿಂತ ಹೆಚ್ಚು ಜಿಎಸ್‌ಟಿ ಸಂಗ್ರಹವಾಗಿರುವುದು ಸರಕು ಮತ್ತು ಸೇವೆಗಳ ಬಳಕೆಯಲ್ಲಿ ಚೇತರಿಕೆ ಸೂಚಿಸುತ್ತದೆ. ಇದರಿಂದ ಪೇಟೆಯಲ್ಲಿ ಖರೀದಿ ಉತ್ಸಾಹ ಕಂಡು ಬರುತ್ತಿದೆ.

ಚೀನಾದ ಆರ್ಥಿಕತೆಗೆ ಉತ್ತೇಜನ ನೀಡಲು ಅಲ್ಲಿಯ ಕೇಂದ್ರೀಯ ಬ್ಯಾಂಕ್‌, ಹೊಸ ಕೊಡುಗೆಗಳನ್ನು ಘೋಷಿಸಿರುವುದು ಜಾಗತಿಕ ಷೇರುಪೇಟೆಗಳಲ್ಲಿ ಖರೀದಿ ಚಟುವಟಿಕೆಗೆ ಪುಷ್ಟಿ ನೀಡಿದೆ.

‘ಕೇಂದ್ರ ಸರ್ಕಾರದ ಬಜೆಟ್‌ ಬಗ್ಗೆ ಹೆಚ್ಚಿದ ನಿರೀಕ್ಷೆಗಳು, ಜಿಎಸ್‌ಟಿ ಸಂಗ್ರಹ ಹೆಚ್ಚಳ, ಕಾರ್ಖಾನೆಗಳ ಉತ್ಪಾದನೆಯು 7 ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿರುವುದರಿಂದ ಸೂಚ್ಯಂಕ ಏರುಗತಿಯಲ್ಲಿ ಇವೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ವಿಶ್ಲೇಷಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು