ಶನಿವಾರ, ಅಕ್ಟೋಬರ್ 1, 2022
25 °C
ಐ.ಟಿ., ಹಣಕಾಸು ವಲಯದ ಷೇರುಗಳ ಉತ್ತಮ ಗಳಿಕೆ

ಮತ್ತೆ 59 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 515 ಅಂಶ ಏರಿಕೆ ಕಂಡು ಮತ್ತೆ 59 ಸಾವಿರದ ಮಟ್ಟವನ್ನು ದಾಟಿತು.

ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರ ಜೊತೆಗೆ ಹೂಡಿಕೆದಾರರು ಐ.ಟಿ, ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಸೂಚ್ಯಂಕದ ಏರಿಕೆಗೆ ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124 ಅಂಶ ಹೆಚ್ಚಾಗಿ 17,659 ಅಂಶಗಳಿಗೆ ತಲುಪಿತು.

ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್‌ ಬ್ಯಾಂಕ್‌ ಷೇರು ಶೇ 2.75ರಷ್ಟು ಗರಿಷ್ಠ ಏರಿಕೆ ಕಂಡಿತು. ಬಜಾಜ್‌ ಫೈನಾನ್ಸ್‌, ಎಚ್‌ಡಿಎಫ್‌ಸಿ, ಟೆಕ್‌ ಮಹೀಂದ್ರ, ವಿಪ್ರೊ, ಎಸ್‌ಬಿಐ, ಟಿಸಿಎಸ್‌ ಮತ್ತು ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳ ಮೌಲ್ಯವೂ ಹೆಚ್ಚಾಯಿತು. ಇನ್ನೊಂದೆಡೆ, ಐಟಿಸಿ, ಎನ್‌ಟಿಪಿಸಿ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್‌, ಮಾರುತಿ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಶೇ 1.56ರವರೆಗೆ ಇಳಿಕೆ ಕಂಡವು.

ಏಷ್ಯಾದಲ್ಲಿ ಹಾಂಕ್‌ಕಾಂಗ್‌, ಶಾಂಘೈ ಮತ್ತು ಸೋಲ್ ಷೇರುಪೇಟೆಗಳು ಗಳಿಕೆ ಕಂಡವು. ಆದರೆ, ಟೋಕಿಯೊ ಷೇರುಪೇಟೆ ನಷ್ಟದಲ್ಲಿ ವಹಿವಾಟು ಅಂತ್ಯಗೊಳಿಸಿತು.

ಅಮೆರಿಕದ ಷೇರುಪೇಟೆ ಮತ್ತು ಏಷ್ಯಾದ ಷೇರುಪೇಟೆಗಳಲ್ಲಿ ನಡೆದ ಸಕಾರಾತ್ಮಕ ವಹಿವಾಟಿನಿಂದಾಗಿ ದೇಶಿ ಷೇರುಪೇಟೆಗಳ ಸೂಚ್ಯಂಕಗಳು ಏರಿಕೆ ಕಂಡವು ಎಂದು ವರ್ತಕರು ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.92ರಷ್ಟು ಏರಿಕೆ ಕಂಡು ಒಂದು ಬ್ಯಾರಲ್‌ಗೆ 98.30 ಡಾಲರ್‌ಗೆ ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು