ಶನಿವಾರ, ಡಿಸೆಂಬರ್ 7, 2019
25 °C
490 ಅಂಶ ಜಿಗಿತ ಕಂಡ ಸಂವೇದಿ ಸೂಚ್ಯಂಕ

ಷೇರುಪೇಟೆ ಚೇತರಿಕೆ

Published:
Updated:
Prajavani

ಮುಂಬೈ (ಪಿಟಿಐ): ಮೂರು ವಹಿವಾಟಿನ ದಿನಗಳಲ್ಲಿ ನಿರಂತರ ಕುಸಿತ ಕಂಡಿದ್ದ ಮುಂಬೈ ಷೇರುಪೇಟೆ ಸಂವೇದಿ
ಸೂಚ್ಯಂಕವು, ಬುಧವಾರದ ವಹಿವಾಟಿನಲ್ಲಿ 490 ಅಂಶಗಳ ಏರಿಕೆ ದಾಖಲಿಸಿತು.

ಹೂಡಿಕೆದಾರರು ಹಣಕಾಸು, ಇಂಧನ ಮತ್ತು ಐ.ಟಿ ಷೇರುಗಳ ಖರೀದಿಗೆ ಮುಗಿ ಬಿದ್ದಿದ್ದರು. ಇದರಿಂದಾಗಿ ಸೂಚ್ಯಂಕವು  39 ಸಾವಿರ ಅಂಶಗಳ ಗಡಿ ದಾಟಿತು. ಸೂಚ್ಯಂಕದ ಪ್ರಮುಖ ಷೇರುಗಳಾದ ರಿಲಯನ್ಸ್ ಇಂಡಸ್ಟ್ರೀಸ್‌, ಎಚ್‌ಡಿಎಫ್‌ಸಿ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳು ಸೂಚ್ಯಂಕದ ಗಳಿಕೆಗೆ ಗಮನಾರ್ಹ ಕೊಡುಗೆ ನೀಡಿವೆ.

ಗುರುವಾರ ಕೊನೆಗೊಳ್ಳಲಿರುವ ಏಪ್ರಿಲ್‌ ತಿಂಗಳ ವಾಯಿದಾ ವಹಿವಾಟಿನ ಹಿನ್ನೆಲೆಯಲ್ಲಿ, ಷೇರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಆನಂತರ ಕಡಿಮೆ ಬೆಲೆಗೆ ಖರೀದಿಸುವ ಹೂಡಿಕೆದಾರರ ಪ್ರವೃತ್ತಿಯು (ಶಾರ್ಟ್‌ ಸೆಲ್ಲಿಂಗ್‌) ಸೂಚ್ಯಂಕ ಜಿಗಿತಕ್ಕೆ ಉತ್ತೇಜನ ನೀಡಿತು. ಜಾಗತಿಕ ಪೇಟೆಯಲ್ಲಿನ ಖರೀದಿ ಉತ್ಸಾಹವು ಇದಕ್ಕೆ ಇನ್ನಷ್ಟು ಪುಷ್ಟಿ ನೀಡಿತು ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ದಿನದ ವಹಿವಾಟಿನ ಆರಂಭದಿಂದಲೂ ಸಕಾರಾತ್ಮಕ ವಹಿವಾಟು ಕಂಡಿದ್ದ ಪೇಟೆಯಲ್ಲಿ ದಿನದ ಅಂತ್ಯದಲ್ಲಿ ಖರೀದಿ ಭರಾಟೆ ಕಂಡು ಬಂದಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು