ದಾಖಲೆ ಮಟ್ಟದ ವಹಿವಾಟು

ಬುಧವಾರ, ಏಪ್ರಿಲ್ 24, 2019
30 °C
ವಿದೇಶಿ ಹೂಡಿಕೆ ಹೆಚ್ಚಳ, ಆರ್‌ಬಿಐನಿಂದ ಬಡ್ಡಿ ಕಡಿತ ನಿರೀಕ್ಷೆ

ದಾಖಲೆ ಮಟ್ಟದ ವಹಿವಾಟು

Published:
Updated:
Prajavani

ಮುಂಬೈ (ಪಿಟಿಐ): ದೇಶದ ಷೇರುಪೇಟೆಗಳು ಮಂಗಳವಾರ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಹಿವಾಟು ಅಂತ್ಯಗೊಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಬಡ್ಡಿದರ ಕಡಿತ ಮಾಡಲಿದೆ ಎನ್ನುವ ಭರವಸೆಯಿಂದ ವಾಹನ, ಐ.ಟಿ ಮತ್ತು ಬ್ಯಾಂಕಿಂಗ್ ಷೇರುಗಳು ಉತ್ತಮ ಗಳಿಕೆ ಕಂಡುಕೊಂಡವು. ಇದರಿಂದ ಸತತ ನಾಲ್ಕನೇ ವಹಿವಾಟು ಅವಧಿಯಲ್ಲಿಯೂ ಸಕಾರಾತ್ಮಕ ಚಟುವಟಿಕೆ ಮುಂದುವರಿಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 185 ಅಂಶಗಳಷ್ಟು ಏರಿಕೆ ಕಂಡು, ಸಾರ್ವಕಾಲಿಕ ಗರಿಷ್ಠ ಮಟ್ಟವಾದ 39,056 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 44 ಅಂಶ ಹೆಚ್ಚಾಗಿ 11,713 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಟಾಟಾ ಮೋಟರ್ಸ್‌ ಎರಡನೇ ದಿನವೂ ಗಳಿಕೆ ಮುಂದುವರಿಸಿತು. ಕಂಪನಿಯ ಷೇರುಗಳು ಮಂಗಳವಾರ
ಶೇ 8ಕ್ಕೂ ಹೆಚ್ಚಿನ ಏರಿಕೆ ಕಂಡುಕೊಂಡವು. 

ವಾಹನ ಉದ್ಯಮದ ಷೇರುಗಳು ಶೇ 16ರವರೆಗೆ ಏರಿಕೆ ಕಂಡಿವೆ. 

ಷೇರುಪೇಟೆಯಗಳಲ್ಲಿ ವಿದೇಶಿ ಸಾಂಸ್ಥಿಕ ಬಂಡವಾಳ ಹೂಡಿಕೆ ಮುಂದುವರಿದಿದೆ.  ದಿನದ ವಹಿವಾಟಿನಲ್ಲಿ ₹ 543 ಕೋಟಿ ತೊಡಗಿಸಿದ್ದಾರೆ.

ಗುರುವಾರದ ಸಭೆಯಲ್ಲಿ ಆರ್‌ಬಿಐನಿಂದ ಬಡ್ಡಿದರ ಕಡಿತದ ನಿರೀಕ್ಷೆ ಮತ್ತು ತ್ರೈಮಾಸಿಕ
ದಲ್ಲಿ ಕಂಪ‍ನಿಗಳ ಫಲಿತಾಂಶದಲ್ಲಿ ಸುಧಾರಣೆ ಕಾಣುವ ಭರವಸೆಯು ಷೇರುಪೇಟೆಯಲ್ಲಿ ಸ್ಥಿರತೆ ಮೂಡಿಸಿದೆ ಎಂದು ತಜ್ಞರು ಹೇಳಿದ್ದಾರೆ.

ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಶೇ 0.25ರಷ್ಟು ಬಡ್ಡಿದರ ಕಡಿತದ ಸಾಧ್ಯತೆ ಇದೆ ಎಂದು ಹಣಕಾಸು ನೀತಿ ಸಮಿತಿ ಮಂಗಳವಾರ ಹೇಳಿದೆ. ಹೂಡಿಕೆದಾರರು ಆರ್‌ಬಿಐ ಸಭೆಯನ್ನು ಕುತೂಹಲದಿಂದ ಎದುರು
ನೋಡುತ್ತಿದ್ದಾರೆ. 

ಬಿಎಸ್‌ಇಗೆ 40 ವರ್ಷ

‘ಸಂವೇದಿ ಸೂಚ್ಯಂಕ 40 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವಾಗಿದೆ’ ಎಂದು ಬಿಎಸ್‌ಇ ಸಿಇಒ ಆಶೀಶ್‌ ಕುಮಾರ್ ಚವಾಣ್‌ ಹೇಳಿದ್ದಾರೆ.

‘ದೇಶದ ಮೊದಲ ಸೂಚ್ಯಂಕ ಇದಾಗಿದ್ದು, ಸಾರ್ವಜನಿಕ ಹೂಡಿಕೆಯ ಕಲ್ಪನೆಯನ್ನು ಸಾಕಾರಗೊಳಿಸಿದೆ. ಇದುವರೆಗೂ ಸಾರ್ವಜನಿಕರಲ್ಲಿ ದೇಶಿ ಷೇರು ಮಾರುಕಟ್ಟೆಯ ಬಗ್ಗೆ ಉತ್ತಮ ಭಾವನೆಯನ್ನು ಮೂಡಿಸಿದೆ.

‘40 ವರ್ಷಗಳಲ್ಲಿ ಶೇ 17ರಷ್ಟು ಪ್ರಗತಿ ಕಂಡಿದ್ದು, ದೇಶದಲ್ಲಿರುವ ಯಾವುದೇ ಸಂಪತ್ತು ವರ್ಗಗಳಿಗಿಂತಲೂ ಗರಿಷ್ಠ ಗಳಿಕೆಯನ್ನು ತಂದುಕೊಟ್ಟಿದೆ’ ಎಂದಿದ್ದಾರೆ.

ರೂಪಾಯಿ 40 ಪೈಸೆ ಗಳಿಕೆ

ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 40 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 68.74ರಂತೆ ವಿನಿಮಯಗೊಂಡಿತು.

ವಿದೇಶಿ ಹೂಡಿಕೆ ಮತ್ತು ಸೂಚ್ಯಂಕ ಏರಿಕೆಯು ರೂಪಾಯಿ ಮೌಲ್ಯ ವೃದ್ಧಿಗೆ ನೆರವಾಗಿದೆ ಎಂದು ವರ್ತಕರು ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.10ರಷ್ಟು ಹೆಚ್ಚಾಗಿ ಒಂದು ಬ್ಯಾರೆಲ್‌ಗೆ 69.08 ಡಾಲರ್‌ಗಳಂತೆ ಮಾರಾಟವಾಯಿತು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !