11,300ರ ಗಡಿ ದಾಟಿದ ನಿಫ್ಟಿ: ಪೇಟೆಯಲ್ಲಿ ಖರೀದಿ ಭರಾಟೆ

ಬುಧವಾರ, ಮಾರ್ಚ್ 27, 2019
26 °C
ಬಿಎಸ್‌ಇ 481 ಅಂಶ ಜಿಗಿತ

11,300ರ ಗಡಿ ದಾಟಿದ ನಿಫ್ಟಿ: ಪೇಟೆಯಲ್ಲಿ ಖರೀದಿ ಭರಾಟೆ

Published:
Updated:
Prajavani

ಮುಂಬೈ: ಹಣಕಾಸು, ಇಂಧನ ಮತ್ತು ದೂರಸಂಪರ್ಕ ವಲಯದ ಷೇರುಗಳು ಉತ್ತಮ ಖರೀದಿಗೆ ಒಳಗಾದವು. ಇದರಿಂದ ಷೇರುಪೇಟೆಯಲ್ಲಿ ಖರೀದಿ ಭರಾಟೆಯು ಸತತ ಎರಡನೆ ದಿನವೂ ಮುಂದುವರಿದಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 481 ಅಂಶ ಏರಿಕೆ ಕಂಡು 37,535 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ. ಆರು ತಿಂಗಳ ಬಳಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 133 ಅಂಶ ಹೆಚ್ಚಾಗಿ 11,301 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ಭಾರ್ತಿ ಏರ್‌ಟೆಲ್‌ ಷೇರು ಶೇ 4.61 ರಷ್ಟು ಗರಿಷ್ಠ ಗಳಿಕೆ ಕಂಡಿತು. ಐಸಿಐಸಿಐ ಬ್ಯಾಂಕ್, ಇಂಡಸ್‌ಇಂಡ್‌ ಬ್ಯಾಂಕ್‌, ಎಲ್‌ಆ್ಯಂಡ್‌ಟಿ, ಸನ್‌ ಫಾರ್ಮಾ, ರಿಲಯನ್ಸ್‌, ಟಾಟಾ ಮೋಟರ್ಸ್‌ ಮತ್ತು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಷೇರುಗಳು ಶೇ 3.69ರವರೆಗೂ ಏರಿಕೆ ದಾಖಲಿಸಿವೆ.

‘ಚುನಾವಣೆಯಲ್ಲಿ ಎರಡನೇ ಅವಧಿಗೂ ಎನ್‌ಡಿಎ ಸರ್ಕಾರವೇ ಗೆಲುವು ಸಾಧಿಸಲಿದೆ ಎನ್ನುವ ವಿಶ್ವಾಸದಿಂದ ವಿದೇಶಿ ಹೂಡಿಕೆದಾರರು ಬಂಡವಾಳ ತೊಡಗಿಸುತ್ತಿದ್ದಾರೆ’ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.

‘ರಾಜಕೀಯ ಅಸ್ಥಿರತೆ ಕಡಿಮೆಯಾಗುತ್ತಿರುವುದರಿಂದ ಷೇರುಪೇಟೆಗಳಲ್ಲಿ ದಿನದಿಂದ ದಿನಕ್ಕೆ ಉತ್ತಮ ವಹಿವಾಟು ನಡೆಯುತ್ತಿದೆ’ ಎಂದು ಸೆಂಟ್ರಂ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಮುಖ್ಯ ಷೇರು ಸಲಹೆಗಾರ ದೇವಾಂಗ್‌ ಮೆಹ್ತಾ ಹೇಳಿದ್ದಾರೆ. ‘ಬಹುನಿರೀಕ್ಷಿತ ವಿದೇಶಿ ಸಾಂಸ್ಥಿಕ ಹೂಡಿಕೆ ಆರಂಭವಾಗಿದೆ. ಚುನಾವಣಾ ಪೂರ್ವ ಷೇರುಪೇಟೆಯ ಓಟಕ್ಕೆ ಇದು ಪ್ರಮುಖ ಕೊಡುಗೆ ನೀಡುತ್ತಿದೆ’ ಎಂದೂ ಹೇಳಿದ್ದಾರೆ.

ಜಾಗತಿಕ ಮಟ್ಟದಲ್ಲಿ, ಏಷ್ಯಾ ಮತ್ತು ಯುರೋಪ್‌ ಮಾರುಕಟ್ಟೆಗಳಲ್ಲಿ ವಹಿವಾಟು ಏರಿಕೆ ಕಂಡುಕೊಂಡಿವೆ.

ಸಂಪತ್ತು ವೃದ್ಧಿ: ಹೂಡಿಕೆದಾರರ ಸಂಪತ್ತು ಮೌಲ್ಯ ₹ 1.20 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆ ಬಂಡವಾಳ ಮೌಲ್ಯ₹ 147 ಲಕ್ಷ ಕೋಟಿಗಳಿಮದ ₹ 148.20  ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !