ಮಾರಾಟ ಒತ್ತಡಕ್ಕೆ ಸೂಚ್ಯಂಕ ಕುಸಿತ

ಮಂಗಳವಾರ, ಮೇ 21, 2019
32 °C

ಮಾರಾಟ ಒತ್ತಡಕ್ಕೆ ಸೂಚ್ಯಂಕ ಕುಸಿತ

Published:
Updated:

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕದ ದಾಖಲೆಯ ನಾಗಾಲೋಟಕ್ಕೆ ಗುರುವಾರದ ವಹಿವಾಟಿನಲ್ಲಿ ತಡೆ ಬಿದ್ದಿತು.

ಷೇರುಗಳ ಬೆಲೆಗಳು ಗರಿಷ್ಠ ಮಟ್ಟದಲ್ಲಿ ಇರುವುದರ ಪ್ರಯೋಜನ ಪಡೆದುಕೊಳ್ಳಲು ಹೂಡಿಕೆದಾರರು ಮಾರಾಟಕ್ಕೆ ಆದ್ಯತೆ ನೀಡಿದ್ದರಿಂದ ಸೂಚ್ಯಂಕವು 135 ಅಂಶಗಳ ಕುಸಿತ ಕಂಡಿತು.

ದಿನದ ವಹಿವಾಟಿನಲ್ಲಿ 39,487 ಅಂಶಗಳಿಗೆ ಏರಿಕೆ ಕಂಡಿದ್ದ ಸೂಚ್ಯಂಕವು, ಆನಂತರ ಶೇ 0.34ರಷ್ಟು ಕುಸಿತ ದಾಖಲಿಸಿ 39,140ಕ್ಕೆ ಇಳಿಯಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 34 ಅಂಶ ಕಳೆದುಕೊಂಡು 11,752 ಅಂಶಗಳಿಗೆ ಇಳಿಯಿತು.

ಮುಂಗಾರು ಈ ಬಾರಿ ವಾಡಿಕೆಯಂತೆ ಇರಲಿದೆ ಎನ್ನುವ ಸುದ್ದಿಯ ಕಾರಣಕ್ಕೆ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿತ್ತು. ಮಹಾವೀರ ಜಯಂತಿ ಪ್ರಯುಕ್ತ ಮಾರುಕಟ್ಟೆಗೆ ಬುಧವಾರ ಬಿಡುವು ಇತ್ತು.

‘ಚುನಾವಣೆ ವೇಳೆ ಗಮನಾರ್ಹ ವಹಿವಾಟು ಕಂಡಿದ್ದ ಪೇಟೆಯಲ್ಲಿ ಸದ್ಯಕ್ಕೆ ಲಾಭ ಮಾಡಿಕೊಳ್ಳುವ ಪ್ರವೃತ್ತಿ ಕಂಡು ಬಂದಿದೆ’ ಎಂದು ಎಂಕೆ ವೆಲ್ತ್‌ ಮ್ಯಾನೇಜ್‌ಮೆಂಟ್‌ನ ಸಂಶೋಧನಾ ಮುಖ್ಯಸ್ಥ ಜೋಸೆಫ್‌ ಥಾಮಸ್‌ ಹೇಳಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !