ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರಾಟ ಒತ್ತಡಕ್ಕೆ ಕುಸಿದ ಸೂಚ್ಯಂಕ

Last Updated 21 ಮೇ 2019, 19:42 IST
ಅಕ್ಷರ ಗಾತ್ರ

ಮುಂಬೈ: ಮಂಗಳವಾರದ ವಹಿವಾಟಿನ ಆರಂಭದಲ್ಲಿ ದಾಖಲೆ ಮಟ್ಟಕ್ಕೆ ತಲುಪಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಆನಂತರ ಮಾರಾಟ ಒತ್ತಡಕ್ಕೆ ಒಳಗಾಗಿ ಕುಸಿತ ಕಂಡಿತು.

ಗರಿಷ್ಠ ಮಟ್ಟದಲ್ಲಿದ್ದ ಷೇರು ಬೆಲೆಗಳ ಪ್ರಯೋಜನ ಪಡೆದುಕೊಳ್ಳಲು ವಹಿವಾಟುದಾರರು ಮಾರಾಟಕ್ಕೆ ಮುಗಿಬಿದ್ದರು.ಇದರಿಂದಾಗಿ ಸಂವೇದಿ ಸೂಚ್ಯಂಕವು ಒಂದು ಹಂತದಲ್ಲಿ 39,571 ಅಂಶಗಳಿಗೆ ಏರಿಕೆ ಕಂಡಿತ್ತು. ದಿನದ ಅಂತ್ಯದಲ್ಲಿ 383 ಅಂಶ ಕುಸಿತ ಕಂಡು 38,969 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತು. ರಾಷ್ಟ್ರೀಯ ಷೇರುಪೇಟೆ ‘ನಿಫ್ಟಿ’ 119 ಅಂಶ ಕುಸಿತ ದಾಖಲಿಸಿ 11,709 ಅಂಶಗಳಿಗೆ ತಲುಪಿತು.

ಎಲ್ಲ ವಲಯಗಳ ಷೇರುಗಳಲ್ಲಿ ಮಾರಾಟ ಒತ್ತಡ ಕಂಡು ಬಂದಿತು. ಟಾಟಾ ಮೋಟರ್ಸ್‌ ಗರಿಷ್ಠ ನಷ್ಟ ಕಂಡಿತು.

ಮತಗಟ್ಟೆ ಸಮೀಕ್ಷೆಗಳು ಅಂದಾಜು ಮಾಡಿರುವಂತೆಯೇ ಚುನಾವಣಾ ಫಲಿತಾಂಶ ಬಂದರೆ, ಪೇಟೆಯಲ್ಲಿ ಖರೀದಿ ಭರಾಟೆ ಮುಂದುವರೆಯಲಿದೆ ಎಂದು ವಹಿವಾಟುದಾರರುಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT