ಮಂಗಳವಾರ, ಆಗಸ್ಟ್ 16, 2022
20 °C

ಷೇರುಪೇಟೆಗಳಲ್ಲಿ ಮೂರು ದಿನಗಳ ನಕಾರಾತ್ಮಕ ಓಟಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬ್ಯಾಂಕಿಂಗ್, ಎಫ್‌ಎಂಸಿಜಿ ಮತ್ತು ಐ.ಟಿ. ವಲಯದ ಷೇರುಗಳ ಉತ್ತಮ ಗಳಿಕೆಯ ಕಾರಣದಿಂದಾಗಿ ದೇಶಿ ಷೇರುಪೇಟೆಗಳು ಮೂರು ದಿನಗಳ ನಕಾರಾತ್ಮಕ ವಹಿವಾಟಿನಿಂದ ಸೋಮವಾರ ಹೊರಬಂದವು.

ಆದರೆ, ರೂಪಾಯಿ ಮೌಲ್ಯ ಇಳಿಕೆ ಮತ್ತು ವಿದೇಶಿ ಬಂಡವಾಳದ ಹೊರಹರಿವಿನ ಕಾರಣಗಳಿಂದಾಗಿ ಸೂಚ್ಯಂಕದ ಗಳಿಕೆ ಕಡಿಮೆ ಆಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 327 ಅಂಶ ಹೆಚ್ಚಾಗಿ 53,235 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 83 ಅಂಶ ಹೆಚ್ಚಾಗಿ 15,835 ಅಂಶಕ್ಕೆ ತಲುಪಿತು.

‘ಕಚ್ಚಾ ತೈಲ ದರ ಇಳಿಕೆ ಮತ್ತು ಯುರೋಪಿನ ಮಾರುಕಟ್ಟೆಗಳ ವಹಿವಾಟು ಸ್ಥಿರತೆ ಕಂಡುಕೊಂಡ ಕಾರಣಗಳಿಂದಾಗಿ ದೇಶಿ ಷೇರುಪೇಟೆಗಳ ಸೂಚ್ಯಂಕಗಳು ಏರಿಕೆ ಕಂಡವು. ವಹಿವಾಟು ಚೇತರಿಕೆ ಕಂಡರೂ, ವಿದೇಶಿ ಬಂಡವಾಳ ಹೊರಹರಿವು ಇರುವುದರಿಂದ ಅಸ್ಥಿರತೆ ಮುಂದುವರಿಯಲಿದೆ’ ಎಂದು ಕೋಟಕ್‌ ಸೆಕ್ಯುರಿಟೀಸ್‌ ಲಿಮಿಟೆಡ್‌ನ ಈಕ್ವಿಟಿ ರಿಸರ್ಚ್‌ನ ಮುಖ್ಯಸ್ಥ ಶ್ರೀಕಾಂತ್‌ ಚೌಹಾಣ್‌ ಹೇಳಿದ್ದಾರೆ.

ಬ್ರೆಂಟ್‌ ಕಚ್ಚಾ ತೈಲ ದರ ಶೇ 0.50ರಷ್ಟು ಇಳಿಕೆ ಕಂಡಿದ್ದು ಒಂದು ಬ್ಯಾರಲ್‌ಗೆ 111 ಡಾಲರ್‌ಗಳಿಗೆ ತಲುಪಿದೆ.

ವಲಯವಾರು ಗಳಿಕೆ (%)

ಎಫ್‌ಎಂಸಿಜಿ;2.49

ಬ್ಯಾಂಕ್‌;1.08

ಬಂಡವಾಳ ಸರಕು;0.97

ಗ್ರಾಹಕ ಬಳಕೆ ವಸ್ತುಗಳು;0.82

ಕೈಗಾರಿಕೆ;0.74

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು