ಗುರುವಾರ , ಡಿಸೆಂಬರ್ 12, 2019
17 °C

ಷೇರುಪೇಟೆಯಲ್ಲಿ ಐದು ವಾರಗಳ ನಷ್ಟಕ್ಕೆ ತಡೆ

Published:
Updated:

ಮುಂಬೈ: ತೀವ್ರ ಏರಿಳಿತದಿಂದ ಕೂಡಿದ್ದ ಮತ್ತು ಐದು ವಹಿವಾಟಿನ ದಿನಗಳಲ್ಲಿ ಮೂರು ದಿನ ಮಾರಾಟ ಒತ್ತಡವನ್ನೇ ಕಂಡಿದ್ದ ಷೇರುಪೇಟೆಯ ವಾರದ ವಹಿವಾಟು ವಾರಾಂತ್ಯದಲ್ಲಿ ಚೇತರಿಕೆ ದಾಖಲಿಸಿ, 5 ವಾರಗಳ ನಷ್ಟಕ್ಕೆ ತಡೆ ಒಡ್ಡಿದೆ.

ಕೆಲ ಅನಿಶ್ಚಿತತೆಯ ಹೊರತಾಗಿಯೂ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ, ವಾರಾಂತ್ಯದಲ್ಲಿ ಶೇ 1.5ರಷ್ಟು ಏರಿಕೆ ದಾಖಲಿಸಿವೆ. ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್‌ ಎದುರು ರೂಪಾಯಿ ಬೆಲೆ ಏಳು ವಾರಗಳಲ್ಲಿ ಇದೇ ಮೊದಲ ಬಾರಿಗೆ ಚೇತರಿಕೆ ಕಂಡಿರುವುದು, ಆರ್‌ಬಿಐ
ನಿಂದ ಬಂಡವಾಳ ಮರುಭರ್ತಿ, ಬ್ಯಾಂಕಿಂಗ್‌, ತೈಲ ಮಾರಾಟ ಸಂಸ್ಥೆ ಮತ್ತು ವಾಹನ ತಯಾರಿಕಾ ಸಂಸ್ಥೆಗಳ ಷೇರು
ಗಳಲ್ಲಿನ ಖರೀದಿ ಭರಾಟೆ ಫಲವಾಗಿ ಪೇಟೆಯಲ್ಲಿ ಉತ್ಸಾಹ ಕಂಡು ಬಂದಿದೆ.

ದ್ವಿತೀಯ ತ್ರೈಮಾಸಿಕದ ಹಣಕಾಸು ಸಾಧನೆಯ ಆರಂಭಿಕ ವರದಿಗಳು ಉತ್ತೇಜಕರವಾಗಿರುವುದೂ ಸಕಾರಾತ್ಮಕ ಪರಿಣಾಮ ಬೀರಿದೆ. ಹಲವಾರು ಜಾಗತಿಕ ವಿದ್ಯಮಾನಗಳ ಪ್ರಭಾವದ ಕಾರಣಕ್ಕೆ ಸೂಚ್ಯಂಕವು ಈ ಹಿಂದಿನ ವಾರಗಳಲ್ಲಿ 6 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿತ್ತು.

ಪ್ರತಿಕ್ರಿಯಿಸಿ (+)