39,000 ಅಂಶ ದಾಟಿದ ಸೆನ್ಸೆಕ್ಸ್‌, ನಿಫ್ಟಿ ಮತ್ತೆ ದಾಖಲೆ

ಬುಧವಾರ, ಏಪ್ರಿಲ್ 24, 2019
24 °C

39,000 ಅಂಶ ದಾಟಿದ ಸೆನ್ಸೆಕ್ಸ್‌, ನಿಫ್ಟಿ ಮತ್ತೆ ದಾಖಲೆ

Published:
Updated:

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 300 ಅಂಶ ಜಿಗಿಯುವ ಮೂಲಕ ಸೋಮವಾರ ಇದೇ ಮೊದಲ ಬಾರಿಗೆ 39,000 ಅಂಶಗಳನ್ನು ಮುಟ್ಟಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 11,700 ಅಂಶ ದಾಟಿದೆ. 

ಕಳೆದ ವರ್ಷ ಆಗಸ್ಟ್‌ನಲ್ಲಿ ಷೇರುಪೇಟೆ ಸೂಚ್ಯಂಕ 38,989 ಅಂಶ ಮುಟ್ಟುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟ ದಾಖಲಾಗಿತ್ತು. ಇದೀಗ 39,000 ಅಂಶಗಳ ಗಡಿ ದಾಟಿದೆ. 2018ರ ಸೆಪ್ಟೆಂಬರ್‌ 3ರ ನಂತರದಲ್ಲಿ ನಿಫ್ಟಿ ಮತ್ತೆ 11,700 ಅಂಶಗಳ ಗಡಿ ದಾಟಿದೆ. ಆರು ತಿಂಗಳ ನಂತರ ಷೇರುಪೇಟೆ ಸೂಚ್ಯಂಕ ಮತ್ತೊಮ್ಮೆ ದಾಖಲೆಯ ಮಟ್ಟ ತಲುಪಿದೆ.

ವೇದಾಂತ, ಟಾಟಾ ಸ್ಟೀಲ್‌, ಟಾಟಾ ಮೋಟಾರ್ಸ್‌, ಮಹೀಂದ್ರಾ ಮತ್ತು ಮಹೀಂದ್ರಾ ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳ ಸಕಾರಾತ್ಮಕ ಚಲನೆ ಮುಂದುವರಿದಿದೆ. 

ಟಾಟಾ ಮೋಟಾರ್ಸ್‌ ಅಂಗ ಸಂಸ್ಥೆಯಾಗಿರುವ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಮಾರ್ಚ್‌ 2019ರ ಕೊನೆಗೆ ಉತ್ತಮ ಲಾಭಾಂಶ ಎದುರು ನೋಡುತ್ತಿರುವುದಾಗಿ ಪ್ರಕಟಿಸುತ್ತಿದ್ದಂತೆ, ಸಂಸ್ಥೆಯ ಷೇರು ಮೌಲ್ಯ ಶೇ 5ರಷ್ಟು ಹೆಚ್ಚಿತು. ಪ್ರತಿ ಷೇರು ₹183ರ ಆಸುಪಾಸಿನಲ್ಲಿ ವಹಿವಾಟು ನಡೆದಿದೆ. 

ಅಮೆರಿಕ ಮತ್ತು ಚೀನಾ ನಡುವಿನ ವಹಿವಾಟು ಮಾತುಕತೆಗೆ ಸ್ಪಂದನೆ ದೊರೆತಿರುವ ಕಾರಣ, ಏಷ್ಯಾದ ಷೇರುಮಾರುಕಟ್ಟೆ ವಹಿವಾಟು ಉತ್ತೇಜನಗೊಂಡಿದೆ. ಕೇಂದ್ರದಲ್ಲಿನ ಆಡಳಿತಾರೂಢ ಸರ್ಕಾರವೇ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆಯಿಂದ ಚಿಲ್ಲರೆ ಹೂಡಿಕೆದಾರರ ಭಾಗವಹಿಸುವಿಕೆ ಮತ್ತು ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಹೆಚ್ಚಾಗುತ್ತಿದೆ ಎಂದು ತಜ್ಞರು ಅಭಿಪ್ರಾಯ ಮಟ್ಟಿದ್ದಾರೆ. 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !