ಭಾನುವಾರ, ಆಗಸ್ಟ್ 25, 2019
21 °C

ಸೇವಾ ವಲಯದ ಬೆಳವಣಿಗೆಗೆ ವೇಗ

Published:
Updated:

ನವದೆಹಲಿ (ಪಿಟಿಐ): ದೇಶದ ಸೇವಾ ವಲಯದ ಚಟುವಟಿಕೆಯು ಜುಲೈನಲ್ಲಿ ಉತ್ತಮ ಪ್ರಗತಿ ಕಂಡಿದೆ ಎಂದು ಐಎಚ್‌ಎಸ್‌ ಮರ್ಕಿಟ್‌ ಸಂಸ್ಥೆ ತಿಳಿಸಿದೆ.

ಸೇವಾ ವಲಯದ ಚಟುವಟಿಕೆ ಸೂಚ್ಯಂಕವು ಜುಲೈನಲ್ಲಿ 49.6 ರಿಂದ 53.8ಕ್ಕೆ ಏರಿಕೆಯಾಗಿದೆ. ಒಂದು ವರ್ಷದಲ್ಲಿಯೇ ಅತ್ಯಂತ ತ್ವರಿತಗತಿಯ ಪ್ರಗತಿ ಸಾಧಿಸಿದೆ.

ಹೊಸ ಯೋಜನೆಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮೂರು ವರ್ಷಗಳಲ್ಲಿಯೇ ಅತ್ಯಂತ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೀಗಾಗಿ ಒಟ್ಟಾರೆ ವಲಯದ ಚಟುವಟಿಕೆಯಲ್ಲಿಯೂ ಏರಿಕೆ ಕಂಡುಬಂದಿದೆ. ಸರ್ಕಾರಿ, ಖಾಸಗಿ ವಲಯದಲ್ಲಿ ಹಾಗೂ ದೇಶಿ ಮತ್ತು ವಿದೇಶಿ ಮಾರುಕಟ್ಟೆಗಳಲ್ಲಿ ಸೇವಾ ಚಟುವಟಿಕೆ ಹೆಚ್ಚಾಗುತ್ತಿದೆ.

Post Comments (+)