ಶಾರ್ಜಾ: ಯುಎಇಯ ಶಾರ್ಜಾ ಹೆಲ್ತ್ಕೇರ್ ಸಿಟಿಯಲ್ಲಿ ‘ತುಂಬೆ ಗ್ರೂಪ್’ ನಿರ್ಮಿಸಲು ಉದ್ದೇಶಿಸಿರುವ ಮೊದಲ ಖಾಸಗಿ ಸಮಗ್ರ ಮಾನಸಿಕ ಆರೋಗ್ಯ ಮತ್ತು ಪುನರ್ವಸತಿ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಈಚೆಗೆ ಭೂಮಿ ಪೂಜೆ ನಡೆಯಿತು.

1.10 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ‘ತುಂಬೆ ಸೈಕಿಯಾಟ್ರಿಕ್ ಆ್ಯಂಡ್ ರಿಹೆಬಿಲಿಟೇಶನ್ ಹಾಸ್ಪಿಟಲ್’ ನಿರ್ಮಾಣವಾಗಲಿದ್ದು, ಇದು 120 ಹಾಸಿಗೆಗಳ ಸೌಲಭ್ಯ ಹೊಂದಿರಲಿದೆ ಎಂದು ಸಂಸ್ಥೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾರ್ಜಾ ಎಕ್ಸಿಕ್ಯೂಟಿವ್ ಕೌನ್ಸಿಲ್ ಸದಸ್ಯ ಹಾಗೂ ಶಾರ್ಜಾ ಹೆಲ್ತ್ಕೇರ್ ಸಿಟಿ ಅಧ್ಯಕ್ಷ ಡಾ. ಅಬ್ದುಲ್ ಅಜೀಜ್ ಸಯೀದ್ ಅಲ್ ಮೆಹೈರಿ ಮಾತನಾಡಿ, ‘ಮಾನವ ಕಲ್ಯಾಣದ ಎಲ್ಲಾ ಯೋಜನೆಗಳಿಗೆ ಸ್ಪಂದಿಸುವ, ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವ ಶಾರ್ಜಾದ ಬದ್ಧತೆಯ ಫಲವಾಗಿ ಈ ಯೋಜನೆ ರೂಪುಗೊಳ್ಳುತ್ತಿದೆ’ ಎಂದರು.

ತುಂಬೆ ಗ್ರೂಪ್ ಸ್ಥಾಪಕ ಅಧ್ಯಕ್ಷ ತುಂಬೆ ಮೊಯ್ದೀನ್ ಮಾತನಾಡಿ, ‘ಈಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆಗಳತ್ತ ನಾವು ಗಮನ ಹರಿಸಿದ್ದೇವೆ. ಈ ಆಸ್ಪತ್ರೆ ಹಲವು ಕುಟುಂಬಗಳಿಗೆ ವಿಶ್ವಾಸಾರ್ಹ ಮತ್ತು ಗೌರವಯುತ ಚಿಕಿತ್ಸಾ ಸೇವೆಗಳನ್ನು ಒದಗಿಸಲಿದೆ’ ಎಂದರು.

ಜೂನ್ ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, 2027ರ ಮಧ್ಯಭಾಗದಲ್ಲಿ ಆಸ್ಪತ್ರೆ ಸೇವೆಗೆ ಸಿದ್ಧವಾಗುವ ನಿರೀಕ್ಷೆಯಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-29-1945963452

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.