ನವದೆಹಲಿ: ಭಾರತ ಸೇರಿದಂತೆ ಏಷ್ಯಾ ಪೆಸಿಫಿಕ್ ಪ್ರದೇಶದಲ್ಲಿ ಪ್ರಸಕ್ತ ವರ್ಷದ ಮಾರ್ಚ್ನಿಂದ ಮೇ ತಿಂಗಳ ಇದುವರೆಗೆ ಸಾಗಣೆ ವೆಚ್ಚವು ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ 19ರಷ್ಟು ಏರಿಕೆಯಾಗಿದೆ ಎಂದು ಸರಕುಗಳ ಸೇವೆ ನೀಡುವ ಫಾರ್ ಐ ಸಂಸ್ಥೆಯ ವರದಿ ತಿಳಿಸಿದೆ.

ಪಶ್ಚಿಮ ಏಷ್ಯಾ ಸಂಘರ್ಷವು ಇಂಧನ ಪೂರೈಕೆ ಮೇಲೆ ಪರಿಣಾಮ ಬೀರಿದೆ. ಅಲ್ಲದೆ, ಇಂಧನ ದರ ಏರಿಕೆ, ಕಾರ್ಮಿಕರ ವೆಚ್ಚ ಹೆಚ್ಚಳ ಸೇರಿದಂತೆ ವಿವಿಧ ಅಂಶಗಳು ಸಾಗಣೆ ವೆಚ್ಚ ಏರಿಕೆಗೆ ಕಾರಣವಾಗಿವೆ ಎಂದು ಹೇಳಿದೆ.

ದೇಶದಲ್ಲಿನ ಕ್ವಿಕ್ ಕಾಮರ್ಸ್ ವಲಯವು 10 ನಿಮಿಷ, 20 ನಿಮಿಷದಲ್ಲಿ ಸರಕುಗಳನ್ನು ಗ್ರಾಹಕರಿಗೆ ತಲುಪಿಸುತ್ತಿವೆ. ಇದು ಕೋಟ್ಯಂತರ ರೂಪಾಯಿ ಹೂಡಿಕೆಯನ್ನು ಆಕರ್ಷಿಸಿದೆ. ಗ್ರಾಹಕರು ತ್ವರಿತವಾಗಿ ಸೇವೆಯನ್ನು ಬಯಸುತ್ತಿಲ್ಲ. ಅವರು ತಮ್ಮ ವಿತರಣೆ ಯಾವಾಗ ಬರುತ್ತದೆ ಎಂದು ತಿಳಿದುಕೊಳ್ಳಲು ಬಯಸುತ್ತಿದ್ದಾರೆ. ಶೇ 60ರಷ್ಟು ಗ್ರಾಹಕರು ನಿರ್ದಿಷ್ಟ ಸಂದರ್ಭಗಳಲ್ಲಿ ಹೆಚ್ಚಿನ ಹಣ ಪಾವತಿಸಲು ಸಿದ್ಧರಿದ್ದಾರೆ ಎಂದು ತಿಳಿಸಿದೆ.

500ಕ್ಕೂ ಹೆಚ್ಚು ಸಾಗಣೆ ಸೇವೆ ನೀಡುವ ಸಂಸ್ಥೆಗಳು ನೀಡಿದ ಮಾಹಿತಿಯನ್ನು ಆಧರಿಸಿ ವರದಿ ಸಿದ್ಧಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.