ಶಿವಮೊಗ್ಗ: ಕರ್ನಾಟಕದ ಪ್ರಸಿದ್ಧ ಗೃಹೋಪಕರಣಗಳ ಮಾರಾಟ ಮಳಿಗೆ ‘ಹರ್ಷ’ ತನ್ನ 22ನೇ ಮಳಿಗೆಯನ್ನು ಇಲ್ಲಿನ ಬಿ.ಎಚ್. ರಸ್ತೆಯಲ್ಲಿರುವ ಪಾರೇಖ ವಿನಾಯಕ ಮಾಲ್ನಲ್ಲಿ ಏಪ್ರಿಲ್ 28ರಂದು ಅದ್ದೂರಿಯಾಗಿ ಉದ್ಘಾಟಿಸಲಿದೆ. ಇದು ಶಿವಮೊಗ್ಗ ನಗರದಲ್ಲಿ ಹರ್ಷ ಸಮೂಹದ 2ನೇ ಮಳಿಗೆಯಾಗಿದ್ದು, ‘ಮೆಗಾ ಸ್ಟೋರ್’ ಪರಿಕಲ್ಪನೆಯೊಂದಿಗೆ ಗ್ರಾಹಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದೆ.

‘ನೂತನ ಮಳಿಗೆಯನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಎಲೆಕ್ಟೋಲಕ್ಸ್ ಇಂಡಿಯಾದ ಎಂ.ಡಿ. ಸುಧೀರ್ ಪಾಟೀಲ ಭಾಗವಹಿಸಲಿದ್ದು, ಮಾಜಿ ಸಚಿವ ವಿನಯಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.

ಮಳಿಗೆಯ ವಿಶೇಷತೆ: ಸಂಪೂರ್ಣ ಹವಾನಿಯಂತ್ರಿತ ಮಳಿಗೆಯಲ್ಲಿ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್, ಎಲ್ಇಡಿ ಟಿವಿ, ರೆಫ್ರಿಜರೇಟರ್, ವಾಷಿಂಗ್ ಮಷಿನ್ ಸೇರಿದಂತೆ ಅತ್ಯಾಧುನಿಕ ಡಿಜಿಟಲ್ ಹಾಗೂ ಗೃಹೋಪಕರಣಗಳ ಬೃಹತ್ ಸಂಗ್ರಹವಿದೆ.

ವಿವಿಧ ಬ್ರಾಂಡ್ಗಳ ಮಿಕ್ಸಿ, ಗ್ರೈಂಡರ್, ಚಿಮ್ಮಿ, ಕುಕ್ಕಿಂಗ್ ಸೆಟ್ ಹಾಗೂ ವಾಟರ್ ಪ್ಯೂರಿಫೈಯರ್ ಸೇರಿದಂತೆ ಅಡುಗೆ ಮನೆಯ ಎಲ್ಲಾ ಪರಿಕರ ಒಂದೇ ಸೂರಿನಡಿ ಲಭ್ಯವಿವೆ. ಗ್ರಾಹಕರಿಗೆ ಸುಲಲಿತ ಶಾಪಿಂಗ್ ಅನುಭವ ನೀಡಲು ಅಂತರರಾಷ್ಟ್ರೀಯ ಮಟ್ಟದ ಡಿಸ್ಪ್ಲೇ ವ್ಯವಸ್ಥೆ ಮಾಡಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-42-1348433364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.