ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್

ಶನಿವಾರ, ಏಪ್ರಿಲ್ 20, 2019
27 °C

ಯುವ ಉದ್ಯಮಿ ಪಟ್ಟಿಯಲ್ಲಿ ಸ್ನೇಹಾ ರಾಕೇಶ್

Published:
Updated:
Prajavani

ಬೆಂಗಳೂರು: ಲಂಡನ್ನಿನ ಯೂರೋಪ್ ಇಂಡಿಯಾ ಸೆಂಟರ್ ಫಾರ್ ಬಿಸಿನೆಸ್ ಆ್ಯಂಡ್‌ ಇಂಡಸ್ಟ್ರಿ (ಇಐಸಿಬಿಐ) ಬ್ರಸೆಲ್ಸ್‌ನ ಯುರೋಪಿಯನ್ ಸಂಸತ್ತಿನಲ್ಲಿ 40 ಯುವ ಉದ್ಯಮಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಯೂರೋಪಿಯನ್ ಸಂಸತ್ತಿನಲ್ಲಿ ನಡೆದ ಈ ಸಮಾರಂಭದಲ್ಲಿ ಭಾರತದ ಯುವ ಉದ್ಯಮಿಗಳಿಗೆ ಆಹ್ವಾನ ನೀಡಲಾಗಿತ್ತು. ಮುಂದಿನ ದಶಕಗಳಲ್ಲಿ ಐರೋಪ್ಯ ಒಕ್ಕೂಟ ಮತ್ತು ಭಾರತದ ವ್ಯಾಪಾರ ಸಂಬಂಧಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ 40 ವರ್ಷದ ಒಳಗಿನ ಎಲ್ಲಾ ಬಗೆಯ ವಾಣಿಜ್ಯ – ವಹಿವಾಟಿನ ಉದ್ಯಮಿಗಳು ಇದರಲ್ಲಿ ಭಾಗವಹಿಸಿದ್ದರು.

‘ಇಯುಇಂಡಿಯಾ 40’ ಜನರ ಪಟ್ಟಿಯಲ್ಲಿ 16 ಮಹಿಳೆಯರು ಮತ್ತು 24 ಪುರುಷ ನವೋದ್ಯಮಿಗಳು ಇದ್ದಾರೆ. ಕರ್ನಾಟಕದ ಸ್ನೇಹಾ ರಾಕೇಶ್ ಅವರು ಭಾರತವನ್ನು ಪ್ರತಿನಿಧಿಸಿದ್ದರು.

ಅಕಾರ್ಮಕ್ಸ್‌ ಟೆಕ್ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕಿಯಾಗಿರುವ ಸ್ನೇಹಾ, ಸಮಗ್ರ ಗ್ರಾಮೀಣ ಅಭಿವೃದ್ಧಿ ಟ್ರಸ್ಟ್‌ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ತರಬೇತಿ ನೀಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !