ಶಿರಸಿ: ಮ್ಯಾನ್ಮಾರ್, ಇಂಡೊನೇಷ್ಯಾದ ಅಗ್ಗದ ದರದ ಅಡಿಕೆ ಕಳ್ಳ ಮಾರ್ಗದ ಮೂಲಕ ದೇಶೀಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವ ಕಾರಣ ಮಲೆನಾಡು ಸೇರಿ ಕರಾವಳಿಯ ಅಡಿಕೆ ಮಾರುಕಟ್ಟೆಯಲ್ಲಿ ದರ ಇಳಿಕೆ ಅಸ್ಥಿರತೆ ಕಾಡುತ್ತಿದೆ.

‘ದೇಶದ ಬೃಹತ್ ಬೇಡಿಕೆಯುಳ್ಳ ರಾಜ್ಯಗಳಾದ ಉತ್ತರ ಪ್ರದೇಶ ಹಾಗೂ ಗುಜರಾತ್ ಮಾರುಕಟ್ಟೆಗಳಿಗೆ ನಮ್ಮ ದೇಶಿ ದರಕ್ಕಿಂತ ಶೇ 20 ರಷ್ಟು ಕಡಿಮೆ ಬೆಲೆಗೆ ಈ ವಿದೇಶಿ ಅಡಿಕೆ ಲಭ್ಯವಾಗುತ್ತಿರುವುದೇ ಪ್ರಸ್ತುತ ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣ’ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಮೇ ತಿಂಗಳ ಆರಂಭದಲ್ಲಿ ಕ್ವಿಂಟಲ್ ಕೆಂಪಡಿಕೆಗೆ ಗರಿಷ್ಠ ₹54 ಸಾವಿರ, ಚಾಲಿ ಅಡಿಕೆಗೆ ₹49 ಸಾವಿರ ದಾಖಲಾಗಿತ್ತು. ಪ್ರಸ್ತುತ ಈ ದರ ಕೆಂಪಡಿಕೆಗೆ ₹52 ಸಾವಿರದಿಂದ ₹53 ಸಾವಿರ, ಚಾಲಿಗೆ ₹47ಸಾವಿರ ಲಭಿಸುತ್ತಿದೆ. ಈ ದರ ಇಳಿಕೆಕೇವಲ ಕೆಂಪಡಿಕೆ, ಚಾಲಿಗೆ ಸೀಮಿತ ವಾಗದೆ ಬೆಟ್ಟೆ, ಬಿಳಿ ಹಾಗೂ ಕೆಂಪು ಗೋಟು ದರದ ಮೇಲೂ ಪರಿಣಾಮ ಬೀರಿದೆ.

‘ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈ ಬಾರಿ ಹೊರ ರಾಜ್ಯಗಳ ಮಾರುಕಟ್ಟೆಯಿಂದ ರಾಜ್ಯದ ಅಡಿಕೆಗೆ ಇರುವ ಬೇಡಿಕೆಯಲ್ಲಿ ಶೇ 15 ರಿಂದ ಶೇ 20ರಷ್ಟು ಕುಸಿತವಾಗಿದೆ. ಶಿರಸಿ ಮಾರುಕಟ್ಟೆಗೆ ಸಂಬಂಧಿಸಿ ಶೇ 35ರಿಂದ 40ರಷ್ಟು ಭಾರಿ ಕುಸಿತ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶಿರಸಿ ಮಾರುಕಟ್ಟೆಯಿಂದ 30 ಸಾವಿರ ಕ್ವಿಂಟಲ್ ಅಡಿಕೆ ಹೊರ ರಾಜ್ಯಗಳಿಗೆ ರಫ್ತಾಗಿತ್ತು’ ಎಂಬುದು ಶಿರಸಿ ತಾಲ್ಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ (ಟಿಎಂಎಸ್)ದ ಮುಖ್ಯ ಕಾರ್ಯನಿರ್ವಾಹಕ ವಿನಯ ಹೆಗಡೆ ಮಾತು.

‘ಈ ಬಾರಿ ಬೇಡಿಕೆಯಷ್ಟು ಅಡಿಕೆ ಪೂರೈಕೆಯಿಲ್ಲದಿದ್ದರೂ ಸಹ ದರ ಏರಿಕೆಯಾಗದೇ ಕುಸಿದಿರುವುದು ಕೃಷಿಕ ವಲಯದಲ್ಲಿ ಆತಂಕ ಮೂಡಿಸಿದೆ’ ಎನ್ನುತ್ತಾರೆ ಶಿರಸಿಯ ಅಡಿಕೆ ಬೆಳೆಗಾರ ಸತ್ಯನಾರಾಯಣ ಹೆಗಡೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-51-2045145768

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.