ಸಣ್ಣ ಉಳಿತಾಯ ಬಡ್ಡಿ ದರ ಯಥಾಸ್ಥಿತಿ

7

ಸಣ್ಣ ಉಳಿತಾಯ ಬಡ್ಡಿ ದರ ಯಥಾಸ್ಥಿತಿ

Published:
Updated:

ನವದೆಹಲಿ: ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳ ಜುಲೈ–ಸೆಪ್ಟೆಂಬರ್‌ ತ್ರೈಮಾಸಿಕದ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬಡ್ಡಿದರಗಳಿಗೆ ಪೂರಕವಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪರಾಮರ್ಶಿಸುವ ವ್ಯವಸ್ಥೆ ಜಾರಿಯಲ್ಲಿ ಇದೆ.

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್‌), ಕಿಸಾನ್‌ ವಿಕಾಸ್‌ ಪತ್ರ (ಕೆವಿಪಿ), ಸುಕನ್ಯಾ ಸಮೃದ್ಧಿ ಯೋಜನೆ ಗಳಿಗೆ ಸಂಬಂಧಿಸಿದಂತೆ 2017–18ನೇ ಹಣಕಾಸು ವರ್ಷದ 4ನೆ ತ್ರೈಮಾಸಿಕದ ಬಡ್ಡಿ ದರಗಳೇ 2018–19ನೆ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿಯೂ ಮುಂದುವರೆಯಲಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಹಿರಿಯ ನಾಗರಿಕರ ಐದು ವರ್ಷಗಳ ಉಳಿತಾಯ ಯೋಜನೆಗೆ ಬಡ್ಡಿಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಪಾವತಿಸಲಾಗುತ್ತಿದೆ. ಸರ್ಕಾರಿ ಬಾಂಡ್‌ಗಳ ಗಳಿಕೆ ಆಧರಿಸಿ ಈ ಬಡ್ಡಿ ದರಗಳನ್ನು ನಿರ್ಧರಿಸಲಾಗುತ್ತಿದೆ.

‘ಪಿಪಿಎಫ್‌’ಗೆ ವಾರ್ಷಿಕ ಶೇ 7.6ರಷ್ಟು ಬಡ್ಡಿ ವಿಧಿಸಲಾಗುತ್ತಿದೆ. 5 ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ (ಶೇ 8.3) ಬಡ್ಡಿಯನ್ನು ಮೂರು ತಿಂಗಳಿಗೊಮ್ಮೆ ಪಾವತಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !