ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾಲ್‌ಕ್ಯಾಪ್‌ ಗಳಿಕೆ ಶೇ 36.64ರಷ್ಟು

Last Updated 3 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ನವದೆಹಲಿ: ಷೇರುಪೇಟೆಗಳಲ್ಲಿ ಸಣ್ಣ ಕಂಪನಿಗಳ (ಸ್ಮಾಲ್‌ಕ್ಯಾಪ್‌) ಷೇರುಗಳು 2021–22ನೇ ಹಣಕಾಸು ವರ್ಷದಲ್ಲಿ ಶೇಕಡ 36.64ರವರೆಗೆ ಗಳಿಕೆ ತಂದುಕೊಟ್ಟಿವೆ. ಪ್ರಸಕ್ತ ಹಣಕಾಸು ವರ್ಷದಲ್ಲಿಯೂ ಇದೇ ರೀತಿಯ ಗಳಿಕೆ ತಂದುಕೊಡಲಿವೆ ಎನ್ನುವುದು ತಜ್ಞರ ನಿರೀಕ್ಷೆಯಾಗಿದೆ.

ಹಿಂದಿನ ಹಣಕಾಸು ವರ್ಷದ ಕೊನೆಯ ಭಾಗದಲ್ಲಿ ಮಾರುಕಟ್ಟೆಯು ಜಾಗತಿಕ ರಾಜಕೀಯ ಬಿಕ್ಕಟ್ಟು, ಹಣದುಬ್ಬರ ಮತ್ತು ವಿದೇಶಿ ಬಂಡವಾಳ ಹೊರಹರಿವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಹಿಂದಿನ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಮಾರುಕಟ್ಟೆ ಸ್ಥಿತಿ ಉತ್ತಮವಾಗಿತ್ತು. ದ್ವಿತೀಯಾರ್ಧದಲ್ಲಿ ಏರಿಳಿತಗಳ ಸ್ಥಿತಿಗೆ ಹೊರಳಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

‘ದೇಶದ ಮಾರುಕಟ್ಟೆಯು ಎಲ್ಲಾ ರೀತಿಯ ಆತಂಕಗಳನ್ನೂ ಮೀರಿ ಬೆಳೆಯುತ್ತಿದ್ದು, ತನ್ನ ಸ್ಥಿತಿಸ್ಥಾಪಕತ್ವ ಗುಣವನ್ನು ತೋರಿಸುತ್ತಿದೆ. ಬಲಿಷ್ಠವಾದ ಗೂಳಿಯ ಓಟ ಮಾರುಕಟ್ಟಿಯಲ್ಲಿ ಇದೆ. ಹೀಗಿದ್ದರೂ, ಕುಸಿತವು ಷೇರುಪೇಟೆಯ ಪ್ರಯಾಣದ ಒಂದು ಭಾಗವೇ ಆಗಿದೆ’ ಎಂದು ಟ್ರೇಡಿಂಗೊ ಕಂಪನಿಯ ಸ್ಥಾಪಕ ಪಾರ್ಥ್‌ ನ್ಯಾತಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT