ಮಂಗಳವಾರ, ಮಾರ್ಚ್ 31, 2020
19 °C

ನವೋದ್ಯಮಿಗಳ ಉತ್ತೇಜನಕ್ಕೆಸೋಷಿಯಲ್ ಆಲ್ಫಾ ಫೆಲೋಷಿಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಟಾಟಾ ಟ್ರಸ್ಟ್‌ ಮತ್ತು ಸೋಷಿಯಲ್‌ ಆಲ್ಫಾ ಸಂಸ್ಥೆಗಳು ಸಾಮಾಜಿಕ ವಲಯದಲ್ಲಿ ಉದ್ಯಮಶೀಲತೆ ಉತ್ತೇಜಿಸುವ ಸಲುವಾಗಿ ಫೆಲೋಷಿಪ್‌ ಘೋಷಿಸಿವೆ.

ಸೋಷಿಯಲ್‌ ಆಲ್ಫಾ ಎಂಟರ್‌ ಪ್ರಿನ್ಯೂರ್ಸ್‌ ಫಾರ್‌ ಇಂಪ್ಯಾಕ್ಟ್‌ (ಇ4ಐ) ಹೆಸರಿನಲ್ಲಿ ಫೆಲೋಷಿಪ್‌ಗೆ ಚಾಲನೆ ನೀಡಲಾಗಿದೆ. ಇದು 12 ತಿಂಗಳ ಕಾರ್ಯಕ್ರಮವಾಗಿದೆ. 2019ರ ಜನವರಿ 6ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಇದೆ. ಅರ್ಜಿ ಸಲ್ಲಿಸಲು www.socialalphachallenge.org ಗೆ ಭೇಡಿ ನೀಡಬೇಕು.

‘ನೀರು, ಒಳಚಂರಡಿ, ಆರೋಗ್ಯ, ಕೃಷಿ, ಇಂಧನ ಮತ್ತು ಪರಿಸರಕ್ಕೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಈ ಕಾರ್ಯಕ್ರಮದಲ್ಲಿ ಗಮನ ನೀಡಲಾಗುವುದು. ಸಮಾಜದಲ್ಲಿ ಬದಲಾವಣೆಗೆ ಕಾರಣವಾಗುವ, ಆರ್ಥಿಕವಾಗಿ ಸುಸ್ಥಿರವಾಗಿರುವ ಉತ್ಪನ್ನಗಳನ್ನು ಅನ್ವೇಷಿಸಲು ಆದ್ಯತೆ ನೀಡಲಾಗುವುದು’ ಎಂದು ಸೋಷಿಯಲ್‌ ಆಲ್ಫಾದ ಸಹ ಸ್ಥಾಪಕ ಮನೋಜ್‌ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಅಂತಿಮ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಟೈಫಂಡ್‌ ರೂಪದಲ್ಲಿ ತಿಂಗಳಿಗೆ ₹ 60 ಸಾವಿರ ನೀಡಲಾಗುವುದು. ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದಿಂದ ಈ ನೆರವು ನೀಡಲಾಗುವುದು. ಈ ಕಾರ್ಯಕ್ರಮವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಉದ್ಯಮದಲ್ಲಿ ಹೊಸ ಅಲೆ ಮೂಡಿಸುವ ವಿಶ್ವಾಸವಿದೆ’ ಎಂದರು.

‘12 ತಿಂಗಳ ಫೆಲೋಷಿಪ್‌ ಮುಗಿದ ಬಳಿಕ ಪ್ರತ್ಯೇಕವಾಗಿ ಉದ್ಯಮ ಸ್ಥಾಪಿಸಲು ಬಯಸಿದರೆ, ಅವರಿಗೆ ಆರಂಭಿಕ ಹೂಡಿಕೆ ಒದಗಿಸಲಾಗುವುದು. ಆಡಳಿತ ಮಂಡಳಿಯ ಮೇಲೆ ನಿಯಂತ್ರಣ ಹೊಂದುವುದಿಲ್ಲ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು