ಸೋಮವಾರ, ಮಾರ್ಚ್ 30, 2020
19 °C

₹2,995ಕ್ಕೆ ಸೊನಾಟಾ ಸ್ಮಾರ್ಟ್‌ವಾಚ್‌; 1 ವರ್ಷ ಬ್ಯಾಟರಿ ಬಾಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊನಾಟಾ ಸ್ಮಾರ್ಟ್‌ ವಾಚ್‌

ಬೆಂಗಳೂರು: ಟೈಟನ್‌ ಸಮೂಹದ ಕೈಗಡಿಯಾರದ ಜನಪ್ರಿಯ ಬ್ರ್ಯಾಂಡ್‌ ಆಗಿರುವ ಸೊನಾಟಾ, ಹೈಬ್ರಿಡ್‌ ಸ್ಮಾರ್ಟ್‌ವಾಚ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

‘ಧರಿಸಬಹುದಾದ ದುಬಾರಿ ದರದ ಬ್ಯಾಂಡ್‌ ಮತ್ತು ಸ್ಮಾರ್ಟ್‌ವಾಚ್‌ಗಳಲ್ಲಿ ಲಭ್ಯವಿದ್ದ ಸೌಲಭ್ಯಗಳನ್ನು ಒಂದೆಡೆಯೇ ಕಡಿಮೆ ಬೆಲೆಗೆ ಒದಗಿಸಿರುವುದು ಹೈಬ್ರಿಡ್‌ ಸ್ಮಾರ್ಟ್‌ವಾಚ್ ‘ಸ್ಟ್ರೈಡ್‌’ನ ವಿಶೇಷತೆಗಳಾಗಿವೆ’ ಎಂದು ಕಂಪನಿಯ ಮಾರುಕಟ್ಟೆ ಮುಖ್ಯಸ್ಥ ಉತ್ಕರ್ಷ ಥಾಕೂರ್ ಹೇಳಿದ್ದಾರೆ.

ಬಳಕೆದಾರರ ನಡಿಗೆ, ಕ್ಯಾಲೊರಿ ನಷ್ಟ, ಗುಣಮಟ್ಟದ ನಿದ್ರೆ ಕುರಿತು ಮಾಹಿತಿ ನೀಡುವ ಬ್ಯಾಂಡ್‌ ಮತ್ತು ಅನಲಾಗ್‌ ಕೈಗಡಿಯಾರಗಳ ವಿಶಿಷ್ಟ ಹೈಬ್ರಿಡ್‌ ಉತ್ಪನ್ನ ಇದಾಗಿದೆ. ಇದಕ್ಕೆ ಪೂರಕವಾಗಿ ಸ್ಟ್ರೈಡ್ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಒಂದು ವರ್ಷದವರೆಗೆ ಬ್ಯಾಟರಿ ಬಾಳಿಕೆ ಇದರ ಇನ್ನೊಂದು ವೈಶಿಷ್ಟ್ಯವಾಗಿದೆ. ಸ್ಟ್ರೈಡ್‌ ಮತ್ತು ಸ್ಟ್ರೈಡ್‌ ಪ್ರೊ ಮಾದರಿಯಲ್ಲಿ ಲಭ್ಯ ಇದೆ. ದರ ₹2,995ರಿಂದ ಆರಂಭವಾಗಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು