ಮುಂಬೈ (ಪಿಟಿಐ): ಮಾರ್ಚ್ ತ್ರೈಮಾಸಿಕದಲ್ಲಿ ನಿವ್ವಳ ಲಾಭವು ಶೇ 18.9ರಷ್ಟು ಹೆಚ್ಚಳ ಕಂಡಿದ್ದು ₹407 ಕೋಟಿಗೆ ತಲುಪಿದೆ ಎಂದು ಸೌತ್ ಇಂಡಿಯನ್ ಬ್ಯಾಂಕ್ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹342 ಕೋಟಿ ನಿವ್ವಳ ಲಾಭ ಗಳಿಸಿತ್ತು. ‘ಸಾಲ ನೀಡಿಕೆಯನ್ನು ವಿವಿಧ ವಲಯಗಳಿಗೆ ವಿಸ್ತರಿಸಿರುವ ಪರಿಣಾಮವಾಗಿ ನಿವ್ವಳ ಬಡ್ಡಿ ವರಮಾನವು ಅಂದಾಜು ಶೇ 4ರಷ್ಟು ಜಾಸ್ತಿ ಆಗಿದೆ’ ಎಂದು ಬ್ಯಾಂಕ್ನ ಎಂ.ಡಿ ಹಾಗೂ ಸಿಇಒ ಪಿ.ಆರ್. ಶೇಷಾದ್ರಿ ಹೇಳಿದ್ದಾರೆ.

ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ಒಟ್ಟು ವರಮಾನವು ₹2,945 ಕೋಟಿ ಆಗಿದೆ.

ಪಶ್ಚಿಮ ಏಷ್ಯಾದಲ್ಲಿನ ಯುದ್ಧವು ದೀರ್ಘ ಅವಧಿಗೆ ಮುಂದುವರಿದು, ಅಲ್ಲಿ ನೆಲಸಿರುವ ಭಾರತೀಯರು ದೊಡ್ಡ ಸಂಖ್ಯೆಯಲ್ಲಿ ಸ್ವದೇಶಕ್ಕೆ ಮರಳಿದರೆ ದೀರ್ಘಾವಧಿಯ ಸಮಸ್ಯೆಯೊಂದು ಸೃಷ್ಟಿಯಾಗಬಹುದು ಎಂದು ಶೇಷಾದ್ರಿ ಹೇಳಿದ್ದಾರೆ.

ಬ್ಯಾಂಕ್ನ ಆಡಳಿತ ಮಂಡಳಿಯು ಷೇರುದಾರರಿಗೆ ಪ್ರತಿ ಷೇರಿಗೆ ₹0.45ರಷ್ಟು ಲಾಭಾಂಶ ನೀಡಲು ಶಿಫಾರಸು ಮಾಡಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-51-1021563613

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.