ಪ್ರೇಮಿಗಳ ದಿನಕ್ಕೆ ವಿಶೇಷ ಉಂಗುರ

7

ಪ್ರೇಮಿಗಳ ದಿನಕ್ಕೆ ವಿಶೇಷ ಉಂಗುರ

Published:
Updated:
Prajavani

ಪ್ರೇಮಿಗಳ ದಿನಕ್ಕಾಗಿ ಪ್ಲಾಟಿನಂ ಕಡೆಯಿಂದ ಲವ್‌ಬ್ಯಾಂಡ್‌ ರೂಪದ ವಿಶೇಷವಾದ ಉಂಗುರಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. 

ಈ ಉಂಗುರಗಳನ್ನು ಖರೀದಿಸಿದ ಆರು ಅದೃಷ್ಟಶಾಲಿ ಜೋಡಿಗಳಿಗೆ ಸ್ವಿಟ್ಜರ್‌ಲೆಂಡ್‌, ಗ್ರೀಸ್‌, ಪ್ಯಾರಿಸ್‌, ಲಂಡನ್‌, ಥಾಯ್ಲೆಂಡ್‌ ಹಾಗೂ ದುಬೈನಲ್ಲಿ ರಜೆ ಕಳೆಯುವ ಅವಕಾಶ ಸಿಗಲಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ನಾಲ್ಕು ದಿನಗಳ ರಜೆಯಲ್ಲಿ ಪ್ಲಾಟಿನಂ ನೆನಪುಗಳ ಆಲ್ಬಮ್‌ ತಯಾರಿಸಲಾಗುತ್ತದೆ. 

ಪ್ರೀತಿಯಲ್ಲಿ ಎಲ್ಲವೂ ಸಮಾನವಾಗಿರಬೇಕು. ಉಂಗುರದಲ್ಲೂ ಪ್ರೀತಿ ಕಾಣಬೇಕು ಎಂಬ ತತ್ವದ ಮೂಲಕ ಈ ಉಂಗುರಗಳನ್ನು ತಯಾರಿಸಲಾಗಿದೆ. ಪ್ರೇಮಿಗಳ ದಿನದಂದು ಈ ಉಂಗುರಗಳನ್ನು ಒಬ್ಬರಿಗೊಬ್ಬರು ಉಡುಗೊರೆಯಾಗಿ ನೀಡುವ ಮೂಲಕ ವಿಶಿಷ್ಟ ದಿನವನ್ನು ಆಚರಿಸಬಹುದು. ಯುವಕ ಮತ್ತು ಯುವತಿ ಇಬ್ಬರಿಗೂ ಒಂದೇ ರೀತಿಯ ಉಂಗುರಗಳು ಲಭ್ಯವಿವೆ. ಇಬ್ಬರಿಗೂ ತಯಾರಿಸಿದ ಉಂಗುರಗಳ ವಿನ್ಯಾಸದಲ್ಲಿ ಸ್ವಲ್ಪ ಬದಲಾವಣೆ ಕಾಯ್ದುಕೊಂಡಿದೆ. ಹೆಣ್ಣುಮಕ್ಕಳ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. 

ನೈಸರ್ಗಿಕವಾದ ಬಿಳಿಯ ಬಣ್ಣದ ಲೋಹದಿಂದ ಪ್ಲಾಟಿನಂ ಉಂಗುರಗಳನ್ನು ಆಧುನಿಕ ಶೈಲಿಯ ವಿನ್ಯಾಸಗಳ ಮೂಲಕ ರೂಪಿಸಲಾಗಿದೆ. 

₹45 ಸಾವಿರದಿಂದ ಉಂಗುರಗಳು ಲಭ್ಯವಿವೆ. www.preciousplatinum.inನಲ್ಲಿ ಉಂಗುರಗಳ ವಿನ್ಯಾಸಗಳನ್ನು ನೋಡಬಹುದು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !