ಸ್ಥಾಯಿ ಸಮಿತಿಗೆ ನಾಳೆ ಮುಖ್ಯಸ್ಥರ ಹೇಳಿಕೆ

7

ಸ್ಥಾಯಿ ಸಮಿತಿಗೆ ನಾಳೆ ಮುಖ್ಯಸ್ಥರ ಹೇಳಿಕೆ

Published:
Updated:

ನವದೆಹಲಿ (ಪಿಟಿಐ): ಸರ್ಕಾರಿ ಸ್ವಾಮ್ಯದ 11 ಬ್ಯಾಂಕ್‌ಗಳ ಮುಖ್ಯಸ್ಥರು ಮಂಗಳವಾರ ಸಂಸತ್ತಿನ ಹಣಕಾಸು ಸ್ಥಾಯಿ ಸಮಿತಿ ಮುಂದೆ ಹಾಜರಾಗಿ ಬ್ಯಾಂಕಿಂಗ್‌ ವಲಯ ಎದುರಿಸುತ್ತಿರುವ ಸವಾಲುಗಳ ವಿವರ ನೀಡಲಿದ್ದಾರೆ.

ಹೆಚ್ಚುತ್ತಿರುವ ವಸೂಲಾಗದ ಸಾಲ (ಎನ್‌ಪಿಎ), ವಂಚನೆ ಪ್ರಕರಣಗಳಲ್ಲಿನ ಏರಿಕೆ ಕುರಿತು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ನೇತೃತ್ವದ ಸಮಿತಿಗೆ ಬ್ಯಾಂಕ್‌ ಮುಖ್ಯಸ್ಥರು ಮಾಹಿತಿ ಸಲ್ಲಿಸಲಿದ್ದಾರೆ. ದೇಶಿ ಬ್ಯಾಂಕಿಂಗ್‌ ವಲಯದ ಮುಂದಿರುವ ಸವಾಲುಗಳು,  ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಲ್ಲಿನ ‘ಎನ್‌ಪಿಎ’ ಬಗೆಹರಿಸಲು ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮಿತಿಯು ಪರಿಶೀಲನೆ ನಡೆಸುತ್ತಿದೆ.

ಕಾರ್ಪೊರೇಷನ್‌ ಬ್ಯಾಂಕ್‌, ಐಡಿ
ಬಿಐ ಬ್ಯಾಂಕ್‌, ಯುಕೊ ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್ ಇಂಡಿಯಾ, ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌, ದೇನಾ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್ ಕಾಮರ್ಸ್‌, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಅಲಹಾಬಾದ್‌ ಬ್ಯಾಂಕ್‌ಗಳ ಉನ್ನತ ಅಧಿಕಾರಿಗಳು ಸಭೆಗೆ ಹಾಜರಾಗಲಿದ್ದಾರೆ. ಸಮಿತಿಯ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.

‘ಎನ್‌ಪಿಎ’ ಏರಿಕೆ ಜತೆಗೆ, ಬ್ಯಾಂಕ್‌
ಗಳಲ್ಲಿನ ವಂಚನೆ ಪ್ರಕರಣ ಸಂಖ್ಯೆಯ
ಲ್ಲಿನ ಹೆಚ್ಚಳವೂ ಇನ್ನೊಂದು ಆತಂಕ
ಕಾರಿ ಬೆಳವಣಿಗೆಯಾಗಿದೆ.

ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಕೂಡಾ ಇತ್ತೀಚೆಗೆ ಈ ಸ್ಥಾಯಿ ಸಮಿತಿ ಮುಂದೆ ಹಾಜರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !