ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟ್ಯಾನ್ಲೆ ಲೈಫ್‍ಸ್ಟೈಲ್: ವಹಿವಾಟು ವಿಸ್ತರಣೆ

Last Updated 2 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಜನಪ್ರಿಯ ಪ್ರೀಮಿಯಂ ಪೀಠೋಪಕರಣ ಮತ್ತು ಗೃಹ ಅಲಂಕಾರ ಉತ್ಪನ್ನಗಳನ್ನು ತಯಾರಿಸುವ ಬೆಂಗಳೂರಿನ ಸ್ಟ್ಯಾನ್ಲೆ ಲೈಫ್‍ಸ್ಟೈಲ್ಸ್ ಕಂಪನಿಯು ಈಗ ವಿಲಾಸಿ ಗೃಹ ಅಲಂಕಾರ ಸೇವೆ ಮತ್ತು ಚರ್ಮದ ಬ್ಯಾಗ್‌, ಶೂಸ್‌ಗಳ ಮಾರಾಟ ವಹಿವಾಟು ಆರಂಭಿಸಿದೆ.

ಈ ವಹಿವಾಟು ವಿಸ್ತರಣೆ ಉದ್ದೇಶಕ್ಕೆ ಕಂಪನಿಯು ನಗರದಲ್ಲಿ ಸ್ಟ್ಯಾನ್ಲೆ ಲೆವೆಲ್ ನೆಕ್ಸ್ಟ್ ಷೋರೂಂ ಆರಂಭಿಸಿದೆ. ಇಲ್ಲಿ ಚರ್ಮದ ಬ್ಯಾಗ್‌ ಮತ್ತು ಶೂಗಳನ್ನು ಮಾರಾಟ ಮಾಡಲಿದೆ.

‘ಎರಡು ವರ್ಷಗಳಲ್ಲಿ ಕಂಪನಿಯು ₹ 20 ಕೋಟಿ ವೆಚ್ಚದಲ್ಲಿ ಇನ್ನೂ ಐದು ಈ ಬಗೆಯ ರಿಟೇಲ್‌ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ. ಸೋಫಾ ಮತ್ತು ಮ್ಯಾಟ್ರೆಸ್‌ಗಳನ್ನು ‘ಸೋಫಾಸ್‌ ಆ್ಯಂಡ್‌ ಮೋರ್‌’ ಮಳಿಗೆಗಳಲ್ಲಿ ಮಾರಾಟ ಮಾಡಲು ಉದ್ದೇಶಿಸಿದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಸುರೇಶ್ ಅವರು ಹೇಳಿದ್ದಾರೆ.

‘ಪೀಠೋಪಕರಣಗಳ ಮಳಿಗೆ ‘ಸೋಫಾಸ್ ಮತ್ತು ಮೋರ್’ ಸಂಖ್ಯೆಯನ್ನು ₹ 50 ಕೋಟಿ ವೆಚ್ಚದಲ್ಲಿ 7 ರಿಂದ 60 ಕ್ಕೆ ಹೆಚ್ಚಿಸಲು ಉದ್ದೇಶಿಸಿದೆ. ಐದು ವರ್ಷಗಳಲ್ಲಿ ಕಂಪನಿಯ ವಹಿವಾಟನ್ನು ₹ 700 ಕೋಟಿಗೆ ಹೆಚ್ಚಿಸಲು ಗುರಿ ನಿಗದಿಪಡಿಸಲಾಗಿದೆ.

‘ಸ್ವೀಡನ್ನಿನ ರಿಟೇಲ್‌ ದೈತ್ಯ ಸಂಸ್ಥೆ ಇಕೆಯಾ ಸಹಯೋಗದಲ್ಲಿ ಸಾಗರೋತ್ತರ ವಹಿವಾಟು ವಿಸ್ತರಿಸಲಿದೆ. ರಫ್ತು ವಹಿವಾಟನ್ನು ಪಶ್ಚಿಮ ಏಷ್ಯಾ ಮತ್ತು ಪೂರ್ವ ಯುರೋಪ್‌ ದೇಶಗಳ ಆಚೆಗೂ ವಿಸ್ತರಿಸಲಾಗುವುದು. ಸದ್ಯಕ್ಕೆ ಕಂಪನಿಯು ₹ 40 ಕೋಟಿ ಮೊತ್ತದ ಪೀಠೋಪಕರಣಗಳನ್ನು ರಫ್ತು ಮಾಡುತ್ತಿದೆ. 2021ರ ಹಣಕಾಸು ವರ್ಷದ ಅಂತ್ಯದ ವೇಳೆಗೆ ಇದನ್ನು ₹ 110 ಕೋಟಿಗೆ ಹೆಚ್ಚಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT