ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವೋದ್ಯಮ ಕ್ಷೇತ್ರ ಮಹಿಳೆಯರಿಗೆ ಆದ್ಯತೆ

Last Updated 31 ಮೇ 2019, 19:13 IST
ಅಕ್ಷರ ಗಾತ್ರ

ನವದೆಹಲಿ: ‘ಸ್ಟಾರ್ಟ್‌ಅಪ್‌ ಇಂಡಿಯಾ ಕಾರ್ಯಕ್ರಮದ ಒಟ್ಟಾರೆ ಫಲಾನುಭವಿಗಳ ಮೂವರಲ್ಲಿ ಒಬ್ಬರು ಮಹಿಳೆಯರು ಇರುವಂತೆ ನೋಡಿಕೊಳ್ಳಲಾಗುವುದು’ ಎಂದು ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಮಂಡಳಿ (ಡಿಪಿಐಐಟಿ) ಕಾರ್ಯದರ್ಶಿ ರಮೇಶ್‌ ಅಭಿಷೇಕ್ ತಿಳಿಸಿದ್ದಾರೆ.

‘ಸುಲಭವಾಗಿ ನಗದು ಲಭ್ಯವಾಗುವಂತೆ ಮಾಡಲು ಪ್ರಾಥಮಿಕ ಬಂಡವಾಳ ಹೂಡಿಕೆದಾರರು ಮತ್ತು ಬ್ಯಾಂಕ್‌ಗಳೊಂದಿಗೆಮಹಿಳಾ ಉದ್ಯಮಿಗಳ ಸಂಪರ್ಕ ಕಾರ್ಯಕ್ರಮ ಆಯೋಜಿಸಲಾಗುವುದು. ಮಹಿಳೆಯರಲ್ಲಿ ಉದ್ಯಮಶೀಲತೆಗೆ ಬೆಂಬಲ ನೀಡಲುಮಹಿಳಾ ಕೇಂದ್ರಿತ ನವೋದ್ಯಮಗಳಿಗೆ ₹ 1 ಸಾವಿರ ಕೋಟಿ ನಿಧಿ ಸ್ಥಾಪಿಸಲಾಗುವುದು.

ಸಾಮರ್ಥ್ಯ ವೃದ್ಧಿಗೆ ಆನ್‌ಲೈನ್‌ ಮತ್ತು ಆಫ್‌ಲೈನ್‌ ಕೋರ್ಸ್‌ಗಳು ಮತ್ತು ಕಾರ್ಯಕ್ರಮಗಳನ್ನೂ ರೂಪಿಸಲಾಗುವುದು. ಮೂಲಕ ಕಾನೂನು, ತೆರಿಗೆ ಮತ್ತು ಹಣಕಾಸು ಸಲಹೆಗಳಿಗಾಗಿಸೇವಾ ಪೂರೈಕೆದಾರರೊಂದಿಗೆ ಸಂಪರ್ಕಿಸಲಾಗುವುದು’ ಎಂದು ಹೇಳಿದ್ದಾರೆ.

ಇಲಾಖೆಯು 18,813 ನವೋದ್ಯಮಗಳನ್ನು ಗುರುತಿಸಿದ್ದು, ಇವು ವಿನಾಯ್ತಿ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಂಡಳಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT