ಬುಧವಾರ, ಫೆಬ್ರವರಿ 19, 2020
29 °C
‘ಎಂಸಿಎಲ್‌ಆರ್‌’ ಕಡಿತ * ಗೃಹ ಸಾಲ ಅಗ್ಗ: 10ರಿಂದ ಜಾರಿ

ಎಸ್‌ಬಿಐ: ಸ್ಥಿರ ಠೇವಣಿ ಬಡ್ಡಿ ದರ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (ಎಸ್‌ಬಿಐ), ಠೇವಣಿಗಳ ಮೇಲಿನ ಹೆಚ್ಚುವರಿ ವೆಚ್ಚ ಆಧರಿಸಿದ ಬಡ್ಡಿ ದರ (ಎಂಸಿಎಲ್‌ಆರ್‌) ಮತ್ತು ಸ್ಥಿರ ಠೇವಣಿಗಳ ಬಡ್ಡಿ ದರಗಳನ್ನು ಇಳಿಸಿದೆ.

ಹೊಸ ದರಗಳು ಇದೇ 10ರಿಂದ ಜಾರಿಗೆ ಬರಲಿವೆ.

‘ಎಂಸಿಎಲ್‌ಆರ್‌’ ಶೇ 0.5ರಷ್ಟು ಮತ್ತು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಶೇ 0.10 ರಿಂದ ಶೇ 0.50ರವರೆಗೆ ತಗ್ಗಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 9ನೇ ಬಾರಿಗೆ ‘ಎಂಸಿಎಲ್‌ಆರ್‌’ ಕಡಿಮೆಯಾಗಿದೆ.

ವಾರ್ಷಿಕ ‘ಎಂಸಿಎಲ್‌ಆರ್‌’ ಈಗ ಶೇ 7.90 ರಿಂದ ಶೇ 7.85ಕ್ಕೆ ಇಳಿದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌, ತನ್ನ ರೆಪೊ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿರುವುದರ ಜತೆಗೆ, ಬ್ಯಾಂಕ್‌ಗಳ ನಿಧಿಗಳ ವೆಚ್ಚ ಅಗ್ಗಗೊಳಿಸಿರುವ ಬೆನ್ನಲ್ಲೇ ಎಸ್‌ಬಿಐ ಈ ನಿರ್ಧಾರ ಪ್ರಕಟಿಸಿದೆ.

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ನಗದು ಲಭ್ಯತೆ ಹೆಚ್ಚಿರುವ ಕಾರಣಕ್ಕೆ ₹2 ಕೋಟಿಗಿಂತ ಕಡಿಮೆ ಮೊತ್ತದ ರಿಟೇಲ್‌ ಸ್ಥಿರ ಠೇವಣಿ ಮತ್ತು ₹2 ಕೋಟಿಗಿಂತ ಹೆಚ್ಚಿನ ಮೊತ್ತದ ಸಗಟು ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರಗಳನ್ನು ಕಡಿಮೆ ಮಾಡಿದೆ.

ರಿಟೇಲ್‌ ಸ್ಥಿರ ಠೇವಣಿಗಳಿಗೆ ಶೇ 0.10 ರಿಂದ ಶೇ 0.50 ಮತ್ತು ಸಗಟು ಸ್ಥಿರ ಠೇವಣಿಗಳಿಗೆ ಶೇ 0.25 ರಿಂದ ಶೇ 0.50ರಂತೆ ಬಡ್ಡಿ ದರ ಇಳಿಸಲಾಗಿದೆ.

ಹೊಸ ಠೇವಣಿಗಳು ಮತ್ತು ಸದ್ಯದಲ್ಲೇ ಎಫ್‌ಡಿ ನವೀಕರಣ ಮಾಡುವವರಿಗೆ ಈ ದರಗಳು ಅನ್ವಯವಾಗಲಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು