ಮುಂಬೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯಗಳ ಬಂಡವಾಳ ವೆಚ್ಚದ ಬೆಳವಣಿಗೆಯು ಶೇ 8ರಿಂದ ಶೇ 10ರಷ್ಟು ಇಳಿಕೆ ಆಗಬಹುದು ಎಂದು ಕೇರ್ಎಡ್ಜ್ ರೇಟಿಂಗ್ಸ್ ವರದಿ ಅಂದಾಜಿಸಿದೆ.

ರಾಜ್ಯಗಳ ವೆಚ್ಚ ಹೆಚ್ಚಳವಾಗುತ್ತಿದೆ. ಆದರೆ, ವರಮಾನದಲ್ಲಿನ ಬೆಳವಣಿಗೆ ಕಡಿಮೆ ಆಗುತ್ತಿದೆ. ಇದು ಪ್ರಗತಿ ನಿಧಾನವಾಗಲು ಒಂದು ಕಾರಣವಾಗಿದೆ ಎಂದು ತಿಳಿಸಿದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದ ಇಂಧನ ದರ ಏರಿಕೆಯಾಗಲಿದ್ದು, ವರಮಾನ ಮತ್ತು ವೆಚ್ಚದ ಮೇಲೆ ಒತ್ತಡ ಬೀಳುವ ನಿರೀಕ್ಷೆ ಇದೆ ಎಂದು ತಿಳಿಸಿದೆ.

ಕೇಂದ್ರದಿಂದ ರಾಜ್ಯಗಳಿಗೆ ಬರುವ ಅನುದಾನ ಕಡಿಮೆ ಆಗುವುದರಿಂದ 2025–26 ಮತ್ತು 2026–27ರ ಆರ್ಥಿಕ ವರ್ಷದಲ್ಲಿ ರಾಜ್ಯಗಳ ವರಮಾನ ಬೆಳವಣಿಗೆ ಮಧ್ಯಮ ಮಟ್ಟದಲ್ಲಿ ಉಳಿಯುವ ನಿರೀಕ್ಷೆಯಿದೆ ಎಂದು ಸಂಸ್ಥೆಯ ಸಹಾಯಕ ನಿರ್ದೇಶಕ ಪ್ರಸನ್ನ ಕೃಷ್ಣನ್ ಹೇಳಿದ್ದಾರೆ.

ಪ್ರಸಕ್ತ ಆರ್ಥಿಕ ವರ್ಷದ ಒಟ್ಟಾರೆ ವರಮಾನದ ಮೇಲೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಬಿಕ್ಕಟ್ಟಿನಂತಹ ಅಂಶಗಳು ಪರಿಣಾಮ ಬೀರಲಿವೆ ಎಂದು ಹೇಳಿದ್ದಾರೆ.

ವಿತ್ತೀಯ ಕೊರತೆಯು 2024–25ರಲ್ಲಿ ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯ (ಜಿಎಸ್ಡಿಪಿ) ಶೇ 0.8ರಷ್ಟಿತ್ತು. ಇದು 2026–27ರಲ್ಲಿ ಶೇ 1.2ಕ್ಕೆ ಹೆಚ್ಚಳವಾಗಬಹುದು. ರಾಜ್ಯಗಳು ಸಮಾಜ ಕಲ್ಯಾಣ ಕಾರ್ಯಗಳಿಗೆ ಬಂಡವಾಳ ಉಳಿಸಿಕೊಳ್ಳುವ ಅಗತ್ಯವಿದ್ದು, ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-51-1484914150

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.