ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಗ್ಗಲಿದೆ ಜಿಎಸ್‌ಟಿ ಆದಾಯ ಕೊರತೆ

Last Updated 21 ಫೆಬ್ರುವರಿ 2021, 14:39 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಕಳೆದ ನಾಲ್ಕು ತಿಂಗಳುಗಳಿಂದ ಸುಧಾರಿಸುತ್ತಿರುವ ಪರಿಣಾಮವಾಗಿ, ರಾಜ್ಯಗಳ ಪಾಲಿನ ಜಿಎಸ್‌ಟಿ ಆದಾಯದಲ್ಲಿನ ಕೊರತೆಯ ಪ್ರಮಾಣವು ತಗ್ಗುವ ಸಾಧ್ಯತೆ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯಗಳ ಜಿಎಸ್‌ಟಿ ಆದಾಯದಲ್ಲಿ ₹ 1.80 ಲಕ್ಷ ಕೋಟಿ ಕೊರತೆ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಇದರಲ್ಲಿ ₹ 1.10 ಲಕ್ಷ ಕೋಟಿ ಕೊರತೆಯು ಜಿಎಸ್‌ಟಿ ವ್ಯವಸ್ಥೆಯ ಅನುಷ್ಠಾನದಿಂದ, ₹ 70 ಸಾವಿರ ಕೋಟಿ ನಷ್ಟವು ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಆಗುವಂಥದ್ದು ಎಂದು ಹೇಳಲಾಗಿತ್ತು. ಈಗ, ಈ ಕೊರತೆಯು ₹ 40 ಸಾವಿರ ಕೋಟಿಯಷ್ಟು ತಗ್ಗುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಜಿಎಸ್‌ಟಿ ವ್ಯವಸ್ಥೆಯ ಅನುಷ್ಠಾನದ ಕಾರಣದಿಂದಾಗಿ ಆಗಿರುವ ₹ 1.10 ಲಕ್ಷ ಕೋಟಿ ಆದಾಯ ಕೊರತೆಯನ್ನು ಭರ್ತಿ ಮಾಡಿಕೊಡುವ ಉದ್ದೇಶಕ್ಕೆ ಸಾಲ ಮಾಡಲು ಕೇಂದ್ರ ಸರ್ಕಾರವು ವಿಶೇಷ ವ್ಯವಸ್ಥೆಯೊಂದನ್ನು ರೂಪಿಸಿತ್ತು. ಈಗ ಜಿಎಸ್‌ಟಿ ಸಂಗ್ರಹ ಸುಧಾರಿಸುತ್ತಿರುವ ಕಾರಣ, ರಾಜ್ಯಗಳ ಜಿಎಸ್‌ಟಿ ಆದಾಯ ಕೊರತೆಯು ₹ 1.40 ಲಕ್ಷ ಕೋಟಿಗೆ ತಗ್ಗಬಹುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಈ ಮೊದಲೇ ಯೋಜಿಸಿದಂತೆ ಒಟ್ಟು ₹ 1.10 ಲಕ್ಷ ಕೋಟಿಯನ್ನು ಸಾಲವಾಗಿ ಪಡೆಯಲಾಗುವುದು. ಹೆಚ್ಚುವರಿ ಮೊತ್ತವನ್ನು ಕೋವಿಡ್–19ರಿಂದ ಆಗಿರುವ ನಷ್ಟ ಭರ್ತಿ ಮಾಡಿಕೊಡಲು ಬಳಸಲಾಗುವುದು’ ಎಂದು ಅಧಿಕಾರಿ ವಿವರಿಸಿದರು. ಕೇಂದ್ರವು ಈಗಾಗಲೇ ₹ 1 ಲಕ್ಷ ಕೋಟಿ ಮೊತ್ತವನ್ನು ಸಾಲವಾಗಿ ತಂದು ರಾಜ್ಯಗಳಿಗೆ ಹಂಚಿಕೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT