ಭಾನುವಾರ, ಡಿಸೆಂಬರ್ 8, 2019
19 °C

ಷೇರುಪೇಟೆ ವಹಿವಾಟು ಚೇತರಿಕೆ

Published:
Updated:

ಮುಂಬೈ: ಮೂರು ವಹಿವಾಟು ಅವಧಿಗಳಲ್ಲಿ ನಷ್ಟಕಂಡಿದ್ದ ಷೇರುಪೇಟೆಗಳ ವಹಿವಾಟು ಸೋಮವಾರ ಚೇತರಿಸಿಕೊಂಡಿತು.

ಖರೀದಿ ಮತ್ತು ಮಾರಾಟದ ಒತ್ತಡದಿಂದಾಗಿ ವಹಿವಾಟು ಚಂಚಲವಾಗಿಯೇ ಇತ್ತು. ಆದರೆ ಏರಿಕೆಯೊಂದಿಗೆ ವಹಿವಾಟು ಅಂತ್ಯಗೊಂಡಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) 98 ಅಂಶ ಹೆಚ್ಚಾಗಿ 34,474 ಅಂಶಗಳಲ್ಲಿ ವಹಿವಾಟು ಅಂತ್ಯವಾಯಿತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 32 ಅಂಶ ಹೆಚ್ಚಾಗಿ 10,198 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಇಂಧನ ದರ ಏರಿಕೆಯಿಂದ ಕುಸಿತಕ್ಕೊಳಗಾಗಿದ್ದ ತೈಲ ಕಂಪನಿಗಳ ಷೇರುಗಳು ಚೇತರಿಕೆ ಹಾದಿಗೆ ಮರಳಿವೆ. ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಶೇ 8.15ರಷ್ಟು  ಮತ್ತು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ ಶೇ 5.63ರಷ್ಟು ಏರಿಕೆ ದಾಖಲಿಸಿವೆ. ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಶೇ 0.19ರಷ್ಟು ಗಳಿಕೆ ಕಂಡುಕೊಂಡಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು