ಗುರುವಾರ , ಸೆಪ್ಟೆಂಬರ್ 16, 2021
24 °C
ಸಗಟು ಹಣದುಬ್ಬರ ಇಳಿಕೆ: 9 ದಿನಗಳ ಸೂಚ್ಯಂಕದ ಇಳಿಮುಖ ಓಟಕ್ಕೆ ತಡೆ

ವಹಿವಾಟು ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ : ದೇಶದ ಷೇರುಪೇಟೆಗಳಲ್ಲಿ 9 ದಿನಗಳಿಂದ ಇಳಿಮುಖವಾಗಿದ್ದ ಸೂಚ್ಯಂಕಗಳು ಮಂಗಳವಾರ ಚೇತರಿಕೆ ಹಾದಿಗೆ ಮರಳಿದವು.

ಏಪ್ರಿಲ್‌ನ ಹಣದುಬ್ಬರದ ಅಂಕಿ–ಅಂಶಗಳಿಂದಾಗಿ ಆರ್‌ಬಿಐ ಮುಂದಿನ ತಿಂಗಳ ಸಭೆಯಲ್ಲಿ ಬಡ್ಡಿದರ ತಗ್ಗಿಸುವ ವಿಶ್ವಾಸ ವ್ಯಕ್ತವಾಗಿದೆ. ಹೀಗಾಗಿ ಹಣಕಾಸು ಮತ್ತು ಇಂಧನ ವಲಯಗಳ ಷೇರುಗಳು ಉತ್ತಮ ಖರೀದಿ ವಹಿವಾಟಿಗೆ ಒಳಗಾಗಿದ್ದರಿಂದ ಸೂಚ್ಯಂಕಗಳು ಏರಿಕೆ ಕಂಡುಕೊಂಡಿವೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 228 ಅಂಶ ಚೇತರಿಕೆ ಕಂಡು 37,318 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.

ಷೇರುಪೇಟೆಯ ಬಂಡವಾಳ ಮೌಲ್ಯ ₹ 145.18 ಲಕ್ಷ ಕೋಟಿಗಳಷ್ಟಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 74 ಅಂಶಗಳಷ್ಟು ಹೆಚ್ಚಾಗಿ 11,222 ಅಂಶಗಳಿಗೆ ತಲುಪಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು