ಷಿಕಾಗೊ/ಪ್ಯಾರಿಸ್: ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ವಿರುದ್ಧ ಸಾರಿರುವ ಸಮರವು ತೀವ್ರಗೊಂಡಿರುವ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಜಿಗಿತ ಕಂಡಿದೆ. ಸೋಮವಾರ ಒಮ್ಮೆಗೇ ಸರಿಸುಮಾರು ಶೇಕಡ 30ರವರೆಗೆ ಏರಿಕೆ ಕಂಡಿದ್ದ ತೈಲ ಬೆಲೆಯು ನಂತರದಲ್ಲಿ ಒಂದಿಷ್ಟು ತಗ್ಗಿದೆ.

ಜಗತ್ತಿನ ವಿವಿಧ ದೇಶಗಳಿಗೆ ಕಚ್ಚಾ ತೈಲ ರವಾನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಹೊರ್ಮುಜ್ ಜಲಸಂಧಿಯ ಮೂಲಕ ಸಾಗಲು ಹಡಗುಗಳಿಗೆ ಸಾಧ್ಯವಾಗದೆ ಇರುವುದು, ದಾಳಿಯ ಪರಿಣಾಮವಾಗಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ಕೊಲ್ಲಿ ರಾಷ್ಟ್ರಗಳು ಕಚ್ಚಾ ತೈಲ ಉತ್ಪಾದನೆ ತಗ್ಗಿಸಿರುವುದು ಈ ಏರಿಕೆ ಕಾರಣ.

ಶನಿವಾರದ ವಹಿವಾಟಿನ ಕೊನೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ಯಾರೆಲ್ಗೆ 93 ಡಾಲರ್ನಷ್ಟಿತ್ತು. ಆದರೆ, ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆ ಬೆಲೆಯು ಪ್ರತಿ ಬ್ಯಾರೆಲ್ಗೆ 119.50 ಡಾಲರ್ ಸನಿಹಕ್ಕೆ ತಲುಪಿತ್ತು. 2022ರ ಮಧ್ಯಭಾಗದ ನಂತರದಲ್ಲಿ ಕಚ್ಚಾ ತೈಲದ ಬೆಲೆಯ ಗರಿಷ್ಠ ಮಟ್ಟ ಇದಾಗಿತ್ತು.

ಕಚ್ಚಾ ತೈಲ ಉತ್ಪಾದನೆಯಲ್ಲಿ ಜಗತ್ತಿನ ಅತಿದೊಡ್ಡ ಕಂಪನಿಯಾದ ಸೌದಿ ಅರೇಬಿಯಾದ ಆರಾಮ್ಕೊ ಉತ್ಪಾದನೆಯನ್ನು ಕಡಿಮೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ. ತೈಲ ಪೂರೈಕೆ ವಿಚಾರವಾಗಿ ತಾನು ಮಾಡಿಕೊಂಡಿರುವ ಗುತ್ತಿಗೆ ಒಪ್ಪಂದಗಳಿಗೆ ಅನುಗುಣವಾಗಿ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಬಹ್ರೇನ್ನ ಬಾಪ್ಕೊ ಎನರ್ಜಿಸ್ ಹೇಳಿದೆ. ಈ ಕಂಪನಿಯ ಸಂಸ್ಕರಣಾಗಾರದ ಮೇಲೆ ದಾಳಿ ಆಗಿದೆ.

ಕಳೆದ ವಾರದ ಅಂತ್ಯದಲ್ಲಿ ಇರಾಕ್ ದೇಶವು ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಿದೆ. ಕುವೈತ್ ಪೆಟ್ರೋಲಿಯಂ ಕಾರ್ಪೊರೇಷನ್ ಕೂಡ ಉತ್ಪಾದನೆ ಕಡಿಮೆ ಮಾಡುತ್ತಿದೆ.

ಹೊರ್ಮುಜ್ ಜಲಸಂಧಿಯ ಮೂಲಕ ಪ್ರತಿನಿತ್ಯ ಸರಿಸುಮಾರು 1.5 ಕೋಟಿ ಬ್ಯಾರೆಲ್ನಷ್ಟು ಕಚ್ಚಾ ತೈಲವನ್ನು ಸಾಗಿಸಲಾಗುತ್ತಿತ್ತು. ಇದು ವಿಶ್ವದ ತೈಲ ಬಳಕೆಯ ಶೇ 20ರಷ್ಟಕ್ಕೆ ಸಮ. ಈಗ ಯುದ್ಧದ ಕಾರಣದಿಂದಾಗಿ, ಇರಾನ್ ಕಡೆಯಿಂದ ದಾಳಿ ಆಗಬಹುದು ಎಂಬ ಭೀತಿಯಿಂದಾಗಿ ಹೊರ್ಮುಜ್ ಜಲಸಂಧಿ ಬಂದ್ ಆಗಿದೆ. ಜಲಸಂಧಿಯ ಮೂಲಕ ಹಡಗು ಸಂಚಾರ ಸ್ಥಗಿತಗೊಂಡಿದೆ.

ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 100 ಡಾಲರ್ಗಿಂತ ಹೆಚ್ಚಿನ ಮಟ್ಟದಲ್ಲಿ ಬಹುಕಾಲ ಉಳಿದರೆ ಜಾಗತಿಕ ಅರ್ಥವ್ಯವಸ್ಥೆಯು ಅದನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂದು ಹಲವು ಮಂದಿ ಹೂಡಿಕೆದಾರರು, ತಜ್ಞರು ಹೇಳಿದ್ದಾರೆ.

ಜಿ7 ಮಧ್ಯಪ್ರವೇಶ: ಕಚ್ಚಾ ತೈಲದ ಬೆಲೆಯು ಭಾರಿ ಪ್ರಮಾಣದಲ್ಲಿ ಜಿಗಿದಿದ್ದ ಸಂದರ್ಭದಲ್ಲಿ ಜಿ–7 ದೇಶಗಳ ಗುಂಪಿನ ಅಧ್ಯಕ್ಷತೆ ಹೊಂದಿರುವ ಫ್ರಾನ್ಸ್ನ ಮೂಲವೊಂದರಿಂದ ಬಂದ ಹೇಳಿಕೆಯು, ತೈಲದ ಬೆಲೆ ತಗ್ಗಲು ಕಾರಣವಾಯಿತು. ವರದಿ ಸಿದ್ಧಪಡಿಸುವ ಸಂದರ್ಭದಲ್ಲಿ ಕಚ್ಚಾ ತೈಲದ ಬೆಲೆಯು ಬ್ಯಾರೆಲ್ಗೆ 100.62 ಡಾಲರ್ ಆಗಿತ್ತು.

ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ತರುವ ಉದ್ದೇಶದಿಂದ, ಮೀಸಲು ಸಂಗ್ರಹದಲ್ಲಿ ಇರುವ ಕಚ್ಚಾ ತೈಲವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಸೋಮವಾರ ನಡೆಯಲಿರುವ ಜಿ–7 ದೇಶಗಳ ಹಣಕಾಸು ಸಚಿವರ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿದವು. ಕೆನಡಾ, ಜರ್ಮನಿ, ಇಟಲಿ, ಜಪಾನ್, ಅಮೆರಿಕ ಮತ್ತು ಬ್ರಿಟನ್ ಈ ಗುಂಪಿನ ಇತರ ಸದಸ್ಯ ರಾಷ್ಟ್ರಗಳು.

ಮೀಸಲು ಕಚ್ಚಾ ತೈಲ ಸಂಗ್ರಹವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಆಲೋಚನೆಗೆ ಅಮೆರಿಕ ಸೇರಿದಂತೆ ಜಿ–7 ಗುಂಪಿನ ಮೂರು ಸದಸ್ಯ ರಾಷ್ಟ್ರಗಳು ಸಹಮತ ಸೂಚಿಸಿವೆ ಎಂಬುದಾಗಿ ಫೈನಾನ್ಶಿಯಲ್ ಟೈಮ್ಸ್ ವರದಿ ಪ್ರಕಟವಾದ ನಂತರ, ಕಚ್ಚಾ ತೈಲ ಬೆಲೆ ಏರಿಕೆ ಪ್ರಮಾಣ ತುಸು ತಗ್ಗಿತು.

‘ಇದು ಅತಿದೊಡ್ಡ ಆಘಾತ’

ಹೊರ್ಮುಜ್ ಜಲಸಂಧಿಯ ಮೂಲಕ ಕಚ್ಚಾ ತೈಲದ ರವಾನೆ ಆಗುತ್ತಿಲ್ಲದಿರುವುದರ ವಿಚಾರವಾಗಿ ಅಮೆರಿಕ ಮೂಲದ ‘ದಿ ಕೊಬೇಸಿ ನ್ಯೂಸ್ಲೆಟರ್’ ಸಂಸ್ಥೆಯು ‘ಇದು ಇತಿಹಾಸದಲ್ಲಿ ತೈಲ ಪೂರೈಕೆ ವಿಚಾರವಾಗಿ ಎದುರಾಗಿರುವ ಅತಿದೊಡ್ಡ ಆಘಾತ’ ಎಂದು ಹೇಳಿದೆ. ಈ ಸಂಸ್ಥೆಯು ಜಾಗತಿಕ ಬಂಡವಾಳ ಮಾರುಕಟ್ಟೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿರುತ್ತದೆ.

ಹೊರ್ಮುಜ್ ಜಲಸಂಧಿ ಬಂದ್ ಆಗಿರುವುದರಿಂದಾಗಿ ಪ್ರತಿದಿನ ಅಂದಾಜು 2 ಕೋಟಿ ಬ್ಯಾರೆಲ್ನಷ್ಟು ಕಚ್ಚಾ ತೈಲದ ಪೂರೈಕೆಗೆ ತಡೆ ಉಂಟಾಗಿದೆ ಎಂದು ಅದು ಅಂದಾಜು ಮಾಡಿದೆ. ಅಲ್ಲದೆ, ಹಿಂದೆ ಪ್ರಮುಖ ಸಂಘರ್ಷಗಳ ಸಂದರ್ಭದಲ್ಲಿ ಕಚ್ಚಾ ತೈಲದ ಪೂರೈಕೆಗೆ ಆಗಿದ್ದ ಅಡ್ಡಿಗಳನ್ನು, ಆಗ ಎಷ್ಟು ಪ್ರಮಾಣದ ತೈಲ ರವಾನೆಗೆ ಅಡ್ಡಿ ಆಗಿತ್ತು ಎಂಬುದರ ವಿವರವನ್ನು ಅದು ನೀಡಿದೆ.

1978ರ ಇರಾನ್ ಕ್ರಾಂತಿಯ ಸಂದರ್ಭದಲ್ಲಿ ಪ್ರತಿನಿತ್ಯ 55 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಸಾಗಾಟಕ್ಕೆ ಅಡ್ಡಿ ಆಗಿತ್ತು. 1973ರ ಯೊಮ್ ಕಿಪ್ಪುರ್ ಯುದ್ಧದ ಹೊತ್ತಿನಲ್ಲಿ ನಿತ್ಯ 45 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ಸಮಸ್ಯೆ ಆಗಿತ್ತು. 1990ರ ಇರಾಕ್–ಕುವೈತ್ ಯುದ್ಧದ ವೇಳೆಗೆ 43 ಲಕ್ಷ ಬ್ಯಾರೆಲ್ ತೈಲ ಸಾಗಾಟಕ್ಕೆ, 1980ರ ಇರಾನ್–ಇರಾಕ್ ಯುದ್ಧದ ವೇಳೆ ನಿತ್ಯ 40 ಲಕ್ಷ ಬ್ಯಾರೆಲ್ ತೈಲ ಸಾಗಣೆಗೆ ತೊಂದರೆ ಆಗಿತ್ತು.

ತೀರಾ ಈಚೆಗೆ, ಅಂದರೆ 2022ರಲ್ಲಿ ಉಕ್ರೇನ್–ರಷ್ಯಾ ಯುದ್ಧ ಆರಂಭವಾದಾಗ ನಿತ್ಯ 20 ಲಕ್ಷ ಬ್ಯಾರೆಲ್ ಕಚ್ಚಾ ತೈಲ ಪೂರೈಕೆಗೆ ತೊಂದರೆ ಆಗಿತ್ತು ಎಂದು ‘ದಿ ಕೊಬೇಸಿ ನ್ಯೂಸ್ಲೆಟರ್’ ವಿವರಿಸಿದೆ.

ಶಾಂತಿಗಾಗಿ ತೆರಬೇಕಿರುವ ಸಣ್ಣ ಬೆಲೆ: ಟ್ರಂಪ್

‘ಕಚ್ಚಾ ತೈಲದ ಅಲ್ಪಾವಧಿಯ ಬೆಲೆಗಳು ಇರಾನ್ನ ಅಣುಶಕ್ತಿ ಬೆದರಿಕೆಯನ್ನು ನಾಶಮಾಡಿದ ನಂತರದಲ್ಲಿ ತಗ್ಗುತ್ತವೆ. ತೈಲದ ಈ ಬೆಲೆಯು ಅಮೆರಿಕ ಮತ್ತು ವಿಶ್ವದ ಸುರಕ್ಷತೆ ಹಾಗೂ ಶಾಂತಿಗಾಗಿ ಪಾವತಿಸಬೇಕಿರುವ ಬಹಳ ಸಣ್ಣ ಬೆಲೆ. ಮೂರ್ಖರು ಮಾತ್ರ ಬೇರೆ ಬಗೆಯಲ್ಲಿ ಆಲೋಚಿಸುತ್ತಾರೆ’ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕಚ್ಚಾ ತೈಲ ಬೆಲೆ ಏರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.