ಶುಕ್ರವಾರ, ಡಿಸೆಂಬರ್ 6, 2019
24 °C
ಸಬ್ಸಿಡಿಸಹಿತ ಸಿಲಿಂಡರ್‌ ಬೆಲೆ ₹5.91 ಇಳಿಕೆ

ಸಬ್ಸಿಡಿರಹಿತ ಎಲ್‌ಪಿಜಿ ದರ ₹120.50 ಅಗ್ಗ

Published:
Updated:

ನವದೆಹಲಿ: ಸಬ್ಸಿಡಿ ಒಳಗೊಂಡಿರುವ ಪ್ರತಿ ಅಡುಗೆ ಅನಿಲ ಸಿಲಿಂಡರುಗಳ (ಎಲ್‌ಪಿಜಿ) ಬೆಲೆಯನ್ನು ₹5.91ರಂತೆ ಮತ್ತು ಸಬ್ಸಿಡಿರಹಿತ ಸಿಲಿಂಡರುಗಳ ಮಾರುಕಟ್ಟೆ ದರವನ್ನು ₹120.50ರಂತೆ ಕಡಿಮೆ ಮಾಡಲಾಗಿದೆ. ಸೋಮವಾರ ಮಧ್ಯರಾತ್ರಿಯಿಂದಲೇ ಹೊಸ ದರ ಜಾರಿಗೆ ಬಂದಿದೆ.

ಒಂದು ತಿಂಗಳಲ್ಲಿನ ಎರಡನೆ ಬೆಲೆ ಕಡಿತದ ನಿರ್ಧಾರ ಇದಾಗಿದೆ. ಈ ತಿಂಗಳ 1ರಂದು ಸಬ್ಸಿಡಿ ಸಹಿತ ಸಿಲಿಂಡರ್‌ನ ಬೆಲೆಯನ್ನು ₹ 6.52ರಂತೆ ಮತ್ತು ಸಬ್ಸಿಡಿರಹಿತ ಸಿಲಿಂಡರ್‌ನ ಬೆಲೆಯನ್ನು ₹ 133 ರಂತೆ ಕಡಿತ ಮಾಡಲಾಗಿತ್ತು. 

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆ ಕುಸಿತಗೊಂಡಿರುವುದು ಮತ್ತು ಡಾಲರ್‌ ಎದುರು ರೂಪಾಯಿ ವಿನಿಮಯ ದರವು ಏರಿಕೆಯ ಹಾದಿಯಲ್ಲಿ ಇರುವುದರಿಂದ ಈ ಬೆಲೆ ಕಡಿತ ಮಾಡಲಾಗಿದೆ. ಗೃಹಬಳಕೆ ಎಲ್‌ಪಿಜಿ ಬಳಕೆದಾರರು ಮಾರುಕಟ್ಟೆ ದರದಲ್ಲಿಯೇ ಸಿಲಿಂಡರ್‌ ಖರೀದಿಸಬೇಕಾಗಿದೆ.

ಒಂದು ವರ್ಷದಲ್ಲಿ ಪ್ರತಿ ಕುಟುಂಬಕ್ಕೆ ವಿತರಿಸಲಾಗುವ 14.2 ಕೆ.ಜಿ ತೂಕದ 12 ಸಿಲಿಂಡರ್‌ಗಳ ಸಬ್ಸಿಡಿ ಮೊತ್ತವನ್ನು ಗ್ರಾಹಕರ
ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು