ಗುರುವಾರ , ಮಾರ್ಚ್ 4, 2021
29 °C

ಕಬ್ಬು ಬಾಕಿ‌ ಏರಿಕೆ ಸಾಧ್ಯತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಬೇಕಿರುವ ಕಬ್ಬು ಬಾಕಿ ಮೊತ್ತವು ₹ 20 ಸಾವಿರ ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ಭಾರತೀಯ ಸಕ್ಕರೆ ಕಾರ್ಖಾನೆಗಳ ಒಕ್ಕೂಟ (ಐಎಸ್‌ಎಂಎ) ಹೇಳಿದೆ.

ಸಕ್ಕರೆಯ ಕಾರ್ಖಾನೆ ದರ ಕೆ.ಜಿಗೆ ₹ 20 ರಿಂದ ₹ 30ರಷ್ಟಿದೆ. ಈ ದರವು ಸಕ್ಕರೆ ಉತ್ಪಾದನೆಗಿಂತಲೂ ಪ್ರತಿ ಕೆ.ಜಿಗೆ ₹ 5 ರಿಂದ ₹ 6 ರಷ್ಟು ಹೆಚ್ಚಿಗೆ ಇದೆ. ಸದ್ಯದ ಕಬ್ಬು ಅರೆಯುವಿಕೆಯ ವೇಗವನ್ನು ಗಮನಿಸಿದರೆ ಕಾರ್ಖಾನೆಗಳಿಗೆ ಬಾಕಿ ಪಾವತಿಸುವುದು ಕಷ್ಟವಾಗಲಿದೆ ಎಂದು ತಿಳಿಸಿದೆ.

ಸಕ್ಕರೆ ಉತ್ಪಾದನಾ ವೆಚ್ಚ ಹೊಂದಿಸಲು ಮತ್ತು ರೈತರಿಗೆ ಕಬ್ಬು ಬಾಕಿ ಪಾವತಿಸಲು ಅನುಕೂಲ ಆಗುವಂತೆ ಕಾರ್ಖಾನೆ ದರವನ್ನು ಪ್ರತಿ ಕೆ.ಜಿಗೆ ಕನಿಷ್ಠ ₹ 35 ರಿಂದ ₹ 36ರಂತೆ ನಿಗದಿ ಮಾಡಬೇಕೆಂದು ಒಕ್ಕೂಟವು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಉತ್ಪಾದನೆ: 2018–19ನೇ ಮಾರುಕಟ್ಟೆ ವರ್ಷದ ನಾಲ್ಕು  ತಿಂಗಳಿನಲ್ಲಿ 185 ಲಕ್ಷ ಟನ್‌ ಕಬ್ಬು ಉತ್ಪಾದನೆ ಆಗಿದ್ದು
ಶೇ 8ರಷ್ಟು ಏರಿಕೆ ಕಂಡಿದೆ.

ಆದರೆ ಒಟ್ಟಾರೆ ಮಾರುಕಟ್ಟೆ ವರ್ಷಕ್ಕೆ ಉತ್ಪಾದನೆ 3.25 ಕೋಟಿ ಟನ್‌ಗಳಿಂದ ₹ 3.07 ಕೋಟಿ ಟನ್‌ಗಳಿಗೆ ಇಳಿಕೆಯಾಗಲಿದೆ ಎಂದು ಒಕ್ಕೂಟ ಹೇಳಿದೆ

2019ರ ಜನವರಿ 31ರವರೆಗೆ ಒಟ್ಟು 514 ಕಾರ್ಖಾನೆಗಳು 185.19 ಲಕ್ಷ ಟನ್‌ ಸಕ್ಕರೆ ಉತ್ಪಾದನೆ ಮಾಡಿವೆ. ಹಿಂದಿನ ಬಾರಿ 504 ಕಾರ್ಖಾನೆಗಳು 171.23 ಲಕ್ಷ ಟನ್‌ ಉತ್ಪಾದನೆ ಮಾಡಿದ್ದವು. ಅವಧಿಗೂ ಮುನ್ನವೇ ಕಬ್ಬು ಅರೆಯುವಿಕೆ ಆರಂಭಿಸಲಾಗಿದೆ. ಹೀಗಾಗಿ ಉತ್ಪಾದನೆಯಲ್ಲಿ ಏರಿಕೆ ಕಂಡುಬಂದಿದೆ ಎಂದು ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು