ಸುಕೋ ಬ್ಯಾಂಕ್‌ ಬೆಳ್ಳಿಹಬ್ಬದ ಸಂಭ್ರಮ

7
ಜ. 5ರಿಂದ ವರ್ಷವಿಡೀ ಕಾರ್ಯಕ್ರಮ

ಸುಕೋ ಬ್ಯಾಂಕ್‌ ಬೆಳ್ಳಿಹಬ್ಬದ ಸಂಭ್ರಮ

Published:
Updated:

ಬಳ್ಳಾರಿ: ‘ರಾಜ್ಯದ ಹದಿನಾಲ್ಕು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಕೋ ಬ್ಯಾಂಕ್‌ ಬೆಳ್ಳಿಹಬ್ಬದ ಸಂಭ್ರಮದಲ್ಲಿದ್ದು, 2019ರ ಜನವರಿ 5ರಿಂದ ವರ್ಷವಿಡೀ ಹಲವು ಕಾರ್ಯಕ್ರಮಗಳು ನಡೆಯಲಿವೆ’ ಎಂದು ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ ಹೇಳಿದರು.

‘ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಜ.5ರಂದು ಸುಸ್ಥಿರ ಕೃಷಿಗಾಗಿ ಮ್ಯಾರಥಾನ್‌ ಓಟದ ಸ್ಪರ್ಧೆ ಏರ್ಪಡಿಸಲಾಗುವುದು. ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಮೊದಲ ಬಹುಮಾನವಾಗಿ ₹ 25ಸಾವಿರ, ಎರಡನೇ ಬಹುಮಾನ ₹ 15 ಸಾವಿರ ಮತ್ತು ತೃತೀಯ ಬಹುಮಾನ ₹ 10 ಸಾವಿರ ನೀಡಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬರ ಗೆದ್ದವರೊಡನೆ ಸಂವಾದ: ‘ಬರ ಗೆದ್ದ ರಾಜ್ಯದ 45 ಕೃಷಿಕರೊಂದಿಗೆ ಕೃಷಿ ಸಚಿವ ಶಿವಶಂಕರ ರೆಡ್ಡಿ ಸಂವಾದ ನಡೆಸಲಿದ್ದಾರೆ. ಉತ್ತರ ಕರ್ನಾಟಕದ, ಮರೆತು ಹೋದ ತಿಂಡಿಗಳು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ ಮೇಳ ಕೂಡ ನಡೆಯಲಿದೆ ಎಂದು ಮಸ್ಕಿ ತಿಳಿಸಿದರು.

‘ಬ್ಯಾಂಕ್, ಮೂರು ವರ್ಷದಿಂದ ಪ್ರಗತಿ ಪರ ರೈತರಿಗೆ ‘ಸುಕೃತ’ ಪ್ರಶಸ್ತಿ ನೀಡುತ್ತಿದ್ದು, ಈ ಬಾರಿಯೂ ಪ್ರಶಸ್ತಿ ಪ್ರದಾನ ಸಮಾರಂಭ ಇಲ್ಲಿನ ಬಸವ ಭವನದಲ್ಲಿ ನಡೆಯಲಿದೆ’ ಎಂದರು.

ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಅಗ್ನಿಹೋತ್ರಿ, ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ್ವರ ರಾವ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !