ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಹಿ ತಿಂಡಿ ಬಳಕೆ ಗಡುವು: ಮಿಠಾಯಿ ಅಂಗಡಿಯಲ್ಲಿ ಪ್ರದರ್ಶನಕ್ಕೆ ಸೂಚನೆ

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ನವದೆಹಲಿ: ಸಿಹಿ ತಿಂಡಿಗಳನ್ನು ಮಾರುವ ಮಳಿಗೆಗಳು ಇನ್ನು ಮುಂದೆ ಅವುಗಳನ್ನು ತಯಾರಿಸಿದ ದಿನ ಮತ್ತು ಬಳಕೆಯ ಗಡುವು ಅವಧಿ ನಮೂದಿಸುವುದನ್ನು ಜಾರಿಗೆ ತರಬೇಕಾಗಿದೆ.

ಪ್ಯಾಕೇಜ್ಡ್ ಅಲ್ಲದ ಸಿಹಿ ತಿಂಡಿಗಳನ್ನು ತಟ್ಟೆಗಳಲ್ಲಿ ತೆರೆದಿಟ್ಟು ಮಾರಾಟ ಮಾಡುವ ಮಳಿಗೆಗಳು ಜೂನ್‌ನಿಂದ ಈ ಆದೇಶ ಪಾಲಿಸಬೇಕಾಗಿದೆ.

ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಈ ಸಂಬಂಧ ಸಿಹಿ ತಿಂಡಿ ಮಾರುವ ಮಳಿಗೆಗಳಿಗೆ ನಿರ್ದೇಶನ ನೀಡಿದೆ. ಅವಧಿ ಪೂರ್ಣಗೊಂಡು ಸೇವಿಸಲು ಯೋಗ್ಯವಲ್ಲದ ಮತ್ತು ಆರೋಗ್ಯ ಏರುಪೇರು ಮಾಡುವ ಸಿಹಿ ತಿಂಡಿಗಳನ್ನು ಮಾರಾಟ ಮಾಡುವ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ಸೂಚನೆ ನೀಡಲಾಗಿದೆ.

ಉತ್ಪನ್ನದ ಸ್ವರೂಪ ಮತ್ತು ಸ್ಥಳೀಯ ಹವಾಮಾನ ಆಧರಿಸಿ ಸಿಹಿ ತಿನಿಸುಗಳನ್ನು ತಯಾರಿಸುವವರೇ ಇಂತಹ ತಿಂಡಿಗಳನ್ನು ಸೇವಿಸಲು ಯೋಗ್ಯವಾದ ಅವಧಿಯನ್ನು ನಮೂದಿಸಬೇಕು. ರಾಜ್ಯಗಳಲ್ಲಿನ ಆಹಾರ ಸುರಕ್ಷತಾ ಅಧಿಕಾರಿಗಳು ಈ ನಿರ್ದೇಶನ ಜಾರಿಯಾಗುವುದರ ಮೇಲೆ ನಿಗಾ ಇರಿಸಬೇಕು ಎಂದು ಸೂಚಿಸಲಾಗಿದೆ.

ಸದ್ಯಕ್ಕೆ ಮುಂಚಿತವಾಗಿಯೇ ಪ್ಯಾಕ್‌ ಮಾಡಿದ ಸಿಹಿ ತಿನಿಸುಗಳ ತಯಾರಿಕೆ ಮತ್ತು ಬಳಕೆಯ ಅಂತಿಮ ದಿನದ ವಿವರಗಳನ್ನು ಮುದ್ರಿಸುವ ವ್ಯವಸ್ಥೆ ಜಾರಿಯಲ್ಲಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT