ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಿಗ್ಗಿ: ಋತುಸ್ರಾವದ ಅವಧಿಯಲ್ಲಿ ರಜೆ

Last Updated 20 ಅಕ್ಟೋಬರ್ 2021, 18:32 IST
ಅಕ್ಷರ ಗಾತ್ರ

ನವದೆಹಲಿ: ಸ್ವಿಗ್ಗಿ ಕಂಪನಿಯು ತನ್ನ ಜೊತೆ ಕೆಲಸ ಮಾಡುವ, ಆಹಾರ ವಸ್ತುಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಮಹಿಳೆಯರಿಗೆ ಋತುಸ್ರಾವದ ಸಂದರ್ಭದಲ್ಲಿ ರಜೆ ತೆಗೆದುಕೊಳ್ಳುವ ಅವಕಾಶ ಕಲ್ಪಿಸಿದೆ. ಅವರು ತಿಂಗಳಲ್ಲಿ ಎರಡು ದಿನ ರಜೆ ತೆಗೆದುಕೊಳ್ಳಲು ಕಂಪನಿ ಅವಕಾಶ ನೀಡಿದೆ. ಈ ರಜೆಗೆ ವೇತನ ಕಡಿತ ಇರುವುದಿಲ್ಲ.

ಸ್ವಿಗ್ಗಿ ಜೊತೆ ಕೆಲಸ ಮಾಡುವ, ಮನೆಗಳಿಗೆ ಆಹಾರ ವಸ್ತು ತಲುಪಿಸುವವರಲ್ಲಿ ಅಂದಾಜು ಒಂದು ಸಾವಿರ ಮಂದಿ ಮಹಿಳೆಯರು. ‘ಮಹಿಳೆಯರು ಋತುಸ್ರಾವದ ಸಂದರ್ಭದಲ್ಲಿ, ತಮ್ಮ ಇಚ್ಛೆಗೆ ಅನುಸಾರವಾಗಿ ತಿಂಗಳಲ್ಲಿ ಎರಡು ದಿನ ಬಿಡುವು ಪಡೆದುಕೊಳ್ಳಬಹುದು. ಈ ಅವಧಿಗೆ ಅವರಿಗೆ ಕನಿಷ್ಠ ಸಂಭಾವನೆಯಲ್ಲಿ ಕಡಿತ ಮಾಡುವುದಿಲ್ಲ’ ಎಂದು ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT