ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್‌ಸ್ಟಾಮಾರ್ಟ್‌ನಲ್ಲಿ ₹ 5,250 ಕೋಟಿ ಹೂಡಿಕೆ: ಸ್ವಿಗ್ಗಿ

Last Updated 2 ಡಿಸೆಂಬರ್ 2021, 14:03 IST
ಅಕ್ಷರ ಗಾತ್ರ

ನವದೆಹಲಿ: ದಿನಸಿ ವಸ್ತುಗಳನ್ನು ತ್ವರಿತವಾಗಿ ಮನೆ ಬಾಗಿಲಿಗೆ ವಿತರಿಸುವ ತನ್ನ ಇನ್‌ಸ್ಟಾಮಾರ್ಟ್‌ ವಹಿವಾಟಿನಲ್ಲಿ ₹ 5,250 ಕೋಟಿ ಬಂಡವಾಳ ಹೂಡಿಕೆ ಮಾಡುವುದಾಗಿ ಸ್ವಿಗ್ಗಿ ಕಂಪನಿಯು ಗುರುವಾರ ಹೇಳಿದೆ.

2020ರಲ್ಲಿ ಬೆಂಗಳೂರು ಮತ್ತು ಗುರುಗ್ರಾಮದಲ್ಲಿ ಆರಂಭವಾದ ಇನ್‌ಸ್ಟಾಮಾರ್ಟ್‌ ಸೇವೆಯು ಸದ್ಯ 18 ನಗರಗಳಿಗೆ ವಿಸ್ತರಿಸಿಕೊಂಡಿದೆ. 2022ರ ಜನವರಿ ವೇಳೆಗೆ 15 ನಿಮಿಷದೊಳಗೆ ಗ್ರಾಹಕರಿಗೆ ದಿನಸಿ ವಸ್ತುಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT