ಗುರುವಾರ , ನವೆಂಬರ್ 14, 2019
22 °C

‘ಸಿಂಡ್‌ನಿವಾಸ್‌ ಟೇಕ್‌ಓವರ್‌ ಧಮಾಕಾ’ ಪ್ರಚಾರ ಅಭಿಯಾನ

Published:
Updated:

ಬೆಂಗಳೂರು: ಸಿಂಡಿಕೇಟ್‌ ಬ್ಯಾಂಕ್‌, ಗೃಹ ಸಾಲಕ್ಕೆ ಸಂಬಂಧಿಸಿದಂತೆ ‘ಸಿಂಡ್‌ನಿವಾಸ್‌ ಟೇಕ್‌ಓವರ್‌ ಧಮಾಕಾ’ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿದೆ.

ಇತರ ಬ್ಯಾಂಕ್‌ಗಳಲ್ಲಿ ಪಡೆದುಕೊಂಡಿರುವ ಗೃಹ ಸಾಲವನ್ನು ಗ್ರಾಹಕರು ಸಿಂಡಿಕೇಟ್‌ ಬ್ಯಾಂಕ್‌ನ ಸ್ಪರ್ಧಾತ್ಮಕವಾದ ಶೇ 8.65 ಬಡ್ಡಿ ದರಕ್ಕೆ ಬದಲಾಯಿಸಲು ಈ ಕಾರ್ಯಕ್ರಮ ಉತ್ತೇಜನ ನೀಡಲಿದೆ. ಬ್ಯಾಂಕ್‌ನ ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ಈ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿದ್ದಾರೆ.

ಸೆಪ್ಟೆಂಬರ್‌ 30ರವರೆಗೆ ಮೂರು ತಿಂಗಳ ಕಾಲ ಈ ಕಾರ್ಯಕ್ರಮ ಜಾರಿಯಲ್ಲಿ ಇರಲಿದೆ. ಈ ಸಂದರ್ಭದಲ್ಲಿ ಯಾವುದೇ ಸೇವಾ ಶುಲ್ಕ ಅನ್ವಯಿಸುವುದಿಲ್ಲ. ಸಾಲ ಮರುಪಾವತಿ ಅವಧಿಯನ್ನು (ಸಾಲಗಾರರಿಗೆ 75 ವರ್ಷ ತುಂಬುವವರೆಗೆ) 30 ವರ್ಷಗಳ ಕಾಲ ವಿಸ್ತರಿಸಲೂ ಅವಕಾಶ ಇದೆ. ಈ ಅವಧಿಯಲ್ಲಿ ಮನೆ ವಿಸ್ತರಣೆ ಮತ್ತು ದುರಸ್ತಿಗೂ ಸಾಲ ಪಡೆಯಬಹುದಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ.

ಪ್ರತಿಕ್ರಿಯಿಸಿ (+)