ಸಿಂಡಿಕೇಟ್‌ ಬ್ಯಾಂಕ್‌ನ 93ನೆ ಸ್ಥಾಪನಾ ದಿನ

7

ಸಿಂಡಿಕೇಟ್‌ ಬ್ಯಾಂಕ್‌ನ 93ನೆ ಸ್ಥಾಪನಾ ದಿನ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಿಂಡಿಕೇಟ್‌ ಬ್ಯಾಂಕ್‌ ತನ್ನ 93ನೆ ಸ್ಥಾಪನಾ ದಿನದ ಅಂಗವಾಗಿ ಇದೇ 10ರಿಂದ 25ರವರೆಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಠೇವಣಿ ಸಂಗ್ರಹ ಮತ್ತು ಸಾಲ ನೀಡಿಕೆಗೆ ಸಂಬಂಧಿಸಿದಂತೆ ವಹಿವಾಟು ವಿಸ್ತರಿಸಲು ಬ್ಯಾಂಕ್‌ನ ಸಿಬ್ಬಂದಿ ಗ್ರಾಹಕರನ್ನು ಸಂಪರ್ಕಿಸಲಿದ್ದಾರೆ. ‘ಬ್ಯಾಂಕ್‌ನ ಬೆನ್ನೆಲುಬು ಆಗಿರುವ ಉದ್ಯಮಿಗಳು, ಯುವ ಜನಾಂಗ ಮತ್ತು ಗ್ರಾಹಕರ ಅಗತ್ಯಗಳನ್ನು ಈಡೇರಿಸಲು ಬ್ಯಾಂಕ್‌ ಬದ್ಧವಾಗಿದೆ’ ಎಂದು ಸಿಇಒ ಮೃತ್ಯುಂಜಯ ಮಹಾಪಾತ್ರ ಅವರು ಹೇಳಿದ್ದಾರೆ.

ಫ್ಲಿಪ್‌ಕಾರ್ಟ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಮಾರಾಟ

ಬೆಂಗಳೂರು: ಫ್ಲಿಪ್‌ಕಾರ್ಟ್‌ನ ’ಬಿಗ್‌ ಬಿಲಿಯನ್‌ ಡೇಸ್‌’ ವಿಶೇಷ ಮಾರಾಟ ಸಂದರ್ಭದಲ್ಲಿ ಮೊಬೈಲ್‌ ತಯಾರಿಕಾ ಸಂಸ್ಥೆ ರಿಯಲ್‌ಮಿ ತನ್ನ 2ಪ್ರೊ ಮತ್ತು ರಿಯಲ್‌ಮಿ ಸಿ1 ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಲಿದೆ.

ಇದರ ಜತೆಗೆ ‘ಡೈಮಂಡ್‌ ಬ್ಲೂ ಎಡಿಷನ್‌’ನ ಸ್ಮಾರ್ಟ್‌ಫೋನ್‌ ಕೂಡ ಖರೀದಿಗೆ ಲಭ್ಯ ಇರಲಿದೆ. ಈ ಸ್ಮಾರ್ಟ್‌ಫೋನ್‌ಗಳನ್ನು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಮೂಲಕ ಖರೀದಿಸಿದರೆ ಶೇ 10ರಷ್ಟು ರಿಯಾಯ್ತಿ ಇರಲಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !