ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸ್ಲೆರಿ ಮಾರಾಟಕ್ಕೆ ಮಾತುಕತೆ

Last Updated 24 ನವೆಂಬರ್ 2022, 17:36 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಬಾಟಲಿಯಲ್ಲಿ ಕುಡಿಯುವ ನೀರನ್ನು ಮಾರಾಟ ಮಾಡುವ ಬಿಸ್ಲೆರಿ ಇಂಟರ್‌ನ್ಯಾ
ಷನಲ್‌ ಕಂಪನಿಗೆ ಖರೀದಿದಾರರನ್ನುಅರಸುತ್ತಿರುವುದಾಗಿ ಕಂಪನಿಯ ಅಧ್ಯಕ್ಷ ರಮೇಶ್ ಚೌಹಾಣ್ ಅವರು ಹೇಳಿದ್ದಾರೆ.

ಈ ವಿಚಾರವಾಗಿ ಟಾಟಾ ಕನ್ಸ್ಯೂಮರ್‌ ಪ್ರಾಡಕ್ಟ್ಸ್‌ (ಟಿಸಿಪಿಎಲ್) ಸೇರಿದಂತೆ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿರುವುದಾಗಿ ಅವರು ತಿಳಿಸಿದ್ದಾರೆ.

ಬಿಸ್ಲೆರಿ ಜೊತೆ ಮತುಕತೆ ನಡೆದಿರುವುದನ್ನು ಟಿಸಿಪಿಎಲ್, ಷೇರುಪೇಟೆಗೆ ನೀಡಿರುವ ಮಾಹಿತಿಯಲ್ಲಿ ಖಚಿತಪಡಿಸಿದೆ. ಕಂಪನಿಯನ್ನು ₹ 7,000 ಕೋಟಿಗೆ ಟಿಸಿಪಿಎಲ್‌ಗೆ ಮಾರಾಟ ಮಾಡುವ ಒಪ್ಪಂದ ಅಂತಿಮಗೊಂಡಿದೆ ಎಂಬ ವರದಿಯನ್ನು ಚೌಹಾಣ್ ಅಲ್ಲಗಳೆದಿದ್ದಾರೆ. ಬಾಟಲಿ ನೀರಿನ ಮಾರುಕಟ್ಟೆಯಲ್ಲಿ ಟಿಸಿಪಿಎಲ್‌ ಈಗಾಗಲೇ ಅಸ್ತಿತ್ವ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT