Apple Store: ದೇಶದಲ್ಲಿ 100 ಮಳಿಗೆ ತೆರೆಯಲು ಟಾಟಾ ಸಮೂಹ ನಿರ್ಧಾರ

ಬೆಂಗಳೂರು: ದೇಶದ 100 ಪ್ರಮುಖ ತಾಣಗಳಲ್ಲಿ ಆ್ಯಪಲ್ ಸ್ಟೋರ್ ತೆರೆಯಲು ಟಾಟಾ ಸಮೂಹ ನಿರ್ಧರಿಸಿದೆ.
ಆ್ಯಪಲ್ ಪ್ರೀಮಿಯಂ ರಿಸೆಲ್ಲರ್ ಮೂಲಕ, ಎಕ್ಸ್‌ಕ್ಲೂಸಿವ್ ಸ್ಟೋರ್ ತೆರೆಯುವುದು ಟಾಟಾ ಯೋಜನೆಯಾಗಿದೆ.
ಟಾಟಾ ಸಮೂಹ ಪ್ರಸ್ತುತ ಕ್ರೋಮಾ ಸ್ಟೋರ್ಸ್ ಮೂಲಕ ಗ್ಯಾಜೆಟ್, ಎಲೆಕ್ಟ್ರಾನಿಕ್ಸ್ ಉಪಕರಣ ಮಾಡುತ್ತಿದೆ. ಇನ್ಫಿನಿಟಿ ರಿಟೇಲ್ ಮೂಲಕ ಟಾಟಾ ಅವುಗಳನ್ನು ನಿರ್ವಹಿಸುತ್ತಿದೆ. ಮುಂದೆ, ಆ್ಯಪಲ್ ಸ್ಟೋರ್ ತೆರೆಯುವ ಮೂಲಕ, ದೇಶದಲ್ಲಿ ಆ್ಯಪಲ್ ಉತ್ಪನ್ನಗಳ ಮಾರಾಟ ಮಾಡಲು ಟಾಟಾ ಮುಂದಾಗಿದೆ.
ಸಣ್ಣ ಮಳಿಗೆಗಳಲ್ಲಿ ಐಫೋನ್, ಐಪ್ಯಾಡ್ ಮತ್ತು ಅಕ್ಸೆಸ್ಸರಿ ಮಾರಾಟ ಮಾಡುವುದು ಟಾಟಾ ಯೋಜನೆಯಾಗಿದ್ದು, ದೊಡ್ಡ ಸ್ಟೋರ್‌ಗಳಲ್ಲಿ ಆ್ಯಪಲ್ ಕಂಪನಿ ಮ್ಯಾಕ್ ಸರಣಿ ಸಹಿತ ಎಲ್ಲ ಉತ್ಪನ್ನ ಒದಗಿಸುವ ಯೋಜನೆ ಹೊಂದಿದೆ ಎಂದು ಮೂಲಗಳನ್ನು ಆಧರಿಸಿ ‘ದಿ ಎಕನಾಮಿಕ್ ಟೈಮ್ಸ್‘ ವರದಿ ಮಾಡಿದೆ.
ಟ್ರೆಕ್ಕಿಂಗ್ ಹೋಗಿ ಕಣಿವೆಗೆ ಬಿದ್ದ ಯುವಕನ ಜೀವ ಉಳಿಸಿದ ಆ್ಯಪಲ್ ವಾಚ್
ದೇಶದಲ್ಲಿ ಆ್ಯಪಲ್ ಸ್ವಂತದ ಮೊದಲ ಸ್ಟೋರ್ 2023ರ ಮಾರ್ಚ್‌ನಲ್ಲಿ ಮುಂಬೈನಲ್ಲಿ ಆರಂಭವಾಗಲಿದೆ. ಅಲ್ಲದೆ, ಆ್ಯಪಲ್ ಐಫೋನ್ ಮತ್ತು ಇತರ ಉತ್ಪನ್ನಗಳ ಮಾರಾಟ ಕೂಡ ಭಾರತದಲ್ಲಿ ಹೆಚ್ಚಾಗಿದೆ.
ಚೀನಾದಿಂದ ಉತ್ಪಾದನಾ ಘಟಕ ಸ್ಥಳಾಂತರ: ಭಾರತ, ವಿಯೆಟ್ನಾಂನತ್ತ ಮುಖ ಮಾಡಿದ ಆ್ಯಪಲ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.