ಟಾಟಾ ಮೋಟರ್ಸ್‌: ವಾಹನ ಬೆಲೆ ಏರಿಕೆ ನಿರ್ಧಾರ

ಶುಕ್ರವಾರ, ಏಪ್ರಿಲ್ 26, 2019
32 °C

ಟಾಟಾ ಮೋಟರ್ಸ್‌: ವಾಹನ ಬೆಲೆ ಏರಿಕೆ ನಿರ್ಧಾರ

Published:
Updated:

ನವದೆಹಲಿ: ಟಾಟಾ ಮೋಟರ್ಸ್‌ ಕಂಪನಿ ಏಪ್ರಿಲ್‌ 1ರಿಂದ ಅನ್ವಯಿಸುವಂತೆ ಪ್ರಯಾಣಿಕ ವಾಹನಗಳ ಬೆಲೆಯನ್ನು
₹ 25 ಸಾವಿರದವರೆಗೂ ಏರಿಕೆ ಮಾಡುವುದಾಗಿ ಹೇಳಿದೆ.

’ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಮತ್ತು ಬಾಹ್ಯ ಆರ್ಥಿಕ ಪರಿಸ್ಥಿತಿಗಳಿಂದಾಗಿ ಬೆಲೆಯಲ್ಲಿ ಏರಿಕೆ ನಿರ್ಧಾರಕ್ಕೆ ಬರಲಾಗಿದೆ’ ಎಂದು ಟಾಟಾ ಮೋಟರ್ಸ್‌ ಕಂಪನಿಯ ಪ್ರಯಾಣಿಕ ವಾಹನ ವಹಿವಾಟಿನ ಅಧ್ಯಕ್ಷ ಮಯಾಂಕ್‌ ಪರೀಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದ್ಯ, ಟಾಟಾ ಮೋಟರ್ಸ್‌ ಕಂಪನಿಯು ನ್ಯಾನೋದಿಂದ ಪ್ರೀಮಿಯಂ ಎಸ್‌ಯುವಿ ಹೆಕ್ಸಾದವರೆಗೆ ₹ 2.36 ಲಕ್ಷ ದಿಂದ ₹ 18.37 ಲಕ್ಷದವರೆಗಿನ ಬೆಲೆಯ ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡುತ್ತಿದೆ.

ತಯಾರಿಕಾ ವೆಚ್ಚದಲ್ಲಿನ ಹೆಚ್ಚಳ ಸರಿದೂಗಿಸಿಕೊಳ್ಳಲು ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾ ಕಂಪನಿಯು ಏಪ್ರಿಲ್‌ 1ರಿಂದ ಅನ್ವಯಿಸುವಂತೆ ತನ್ನ ಆಯ್ದ ವಾಹನಗಳ ಬೆಲೆಯನ್ನು ಶೇ 4ರವರೆಗೂ ಹೆಚ್ಚಳ ಮಾಡುವುದಾಗಿ ತಿಳಿಸಿದೆ. ಟೊಯೋಟ ಕಿರ್ಲೋಸ್ಕರ್‌ ಮೋಟರ್‌ (ಟಿಕೆಎಂ) ಕಂಪನಿ ಸಹ ಬೆಲೆ ಏರಿಕೆ ನಿರ್ಧಾರ ಪ್ರಕಟಿಸಿದೆ. ಆದರೆ, ಯಾವ ಪ್ರಮಾಣದಲ್ಲಿ, ಯಾವೆಲ್ಲಾ ಮಾದರಿಗಳ ಬೆಲೆಯಲ್ಲಿ ಏರಿಕೆಯಾಗಲಿದೆ ಎನ್ನುವುದನ್ನು ತಿಳಿಸಿಲ್ಲ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !