ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌ಗೆ ₹ 3,679 ಕೋಟಿ ನಷ್ಟ

Last Updated 26 ಜುಲೈ 2019, 19:50 IST
ಅಕ್ಷರ ಗಾತ್ರ

ನವದೆಹಲಿ: ವಾಹನ ತಯಾರಿಕಾ ಸಂಸ್ಥೆ ಟಾಟಾ ಮೋಟರ್ಸ್‌ ಜೂನ್‌ಗೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ ₹ 3,679 ಕೋಟಿ ನಷ್ಟಕ್ಕೆ ಗುರಿಯಾಗಿದೆ.

ಭಾರತ ಮತ್ತು ಚೀನಾ ಮಾರುಕಟ್ಟೆಯಲ್ಲಿ ವಾಹನಗಳ ಮಾರಾಟವು ಗಮನಾರ್ಹವಾಗಿ ಕುಸಿದಿರುವ ಕಾರಣಕ್ಕೆ ಈ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ. ವರ್ಷದ ಹಿಂದಿನ ಇದೇ ಅವಧಿಯಲ್ಲಿಯೂ ಸಂಸ್ಥೆಯು ₹ 1,862 ಕೋಟಿಗಳ ನಷ್ಟ ಕಂಡಿತ್ತು. ಮಾರುಕಟ್ಟೆ ವೆಚ್ಚ ಹೆಚ್ಚಳ ಮತ್ತು ವಾಹನಗಳ ಮಾರಾಟ ಉತ್ತೇಜಿಸಲು ಗ್ರಾಹಕರಿಗೆ ಕೊಡಮಾಡಿದ ಬೆಲೆ ಕಡಿತದ ಕೊಡುಗೆಗಳಿಂದ ಸಂಸ್ಥೆಯ ಲಾಭದ ಮೇಲೆ ವ್ಯತಿರಿಕ್ತ ಪರಿಣಾಮಗಳು ಕಂಡು ಬಂದಿವೆ.

ಈ ಅವಧಿಯಲ್ಲಿನ ಒಟ್ಟಾರೆ ವರಮಾನವು ₹ 61,466 ಕೋಟಿಗಳಷ್ಟಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿನ ವಹಿವಾಟು ₹ 66,701 ಕೋಟಿಗಳಷ್ಟಿತ್ತು. ‘ಮಾರಾಟ ಕುಸಿತವೇ ನಷ್ಟಕ್ಕೆ ಮೂಲ ಕಾರಣವಾಗಿದೆ. ಇದರ ಜತೆಗೆ ಮಾರುಕಟ್ಟೆ ವೆಚ್ಚದಲ್ಲಿನ ಹೆಚ್ಚಳ ಮತ್ತು ತೀವ್ರ ಸ್ಪರ್ಧೆಯ ಪಾಲೂ ಇದೆ’ ಎಂದು ಟಾಟಾ ಮೋಟರ್ಸ್‌ ಗ್ರೂಪ್ಸ್‌ನ ಸಿಎಫ್‌ಒ ಪಿ. ಬಿ. ಬಾಲಾಜಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT