ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌ ನಿವ್ವಳ ಲಾಭ ಶೇ 68 ಏರಿಕೆ

Last Updated 29 ಜನವರಿ 2021, 16:20 IST
ಅಕ್ಷರ ಗಾತ್ರ

ನವದೆಹಲಿ: ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭ ಶೇ 67.52ರಷ್ಟು ಹೆಚ್ಚಳವಾಗಿದೆ ಎಂದು ಟಾಟಾ ಮೋಟರ್ಸ್‌ ಶುಕ್ರವಾರ ಹೇಳಿದೆ.

ಆರ್ಥಿಕತೆಯು ಕ್ರಮೇಣವಾಗಿ ಸುಧಾರಣೆ ಕಾಣುತ್ತಿದ್ದು ಬೇಡಿಕೆ ಹೆಚ್ಚಾಗುತ್ತಿರುವುದು ಲಾಭ ಹೆಚ್ಚಳವಾಗಲು ಕಾರಣವಾಗಿದೆ. ಡಿಸೆಂಬರ್‌ ತ್ರೈಮಾಸಿಕದ ಒಟ್ಟು ಆದಾಯ ₹75,653.79 ಕೋಟಿಗೆ ಏರಿಕೆಯಾಗಿದ್ದು, 2019ರ ಇದೇ ಅವಧಿಯಲ್ಲಿ ಒಟ್ಟು ಆದಾಯ ₹71,676.07 ಕೋಟಿ ಇತ್ತು.

ಬೇಡಿಕೆ ಹೆಚ್ಚಳ ಹಾಗೂ ಆರ್ಥಿಕತೆಯು ಚೇತರಿಸಿಕೊಂಡ ಕಾರಣ ಮೂರನೇ ತ್ರೈಮಾಸಿಕದಲ್ಲಿ ಮಾರಾಟವು ವೇಗ ಪಡೆದಿತ್ತು ಎಂದು ಟಾಟಾ ಮೋಟರ್ಸ್‌ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಗುಂಟೆರ್‌ ಬುಟ್‌ಶೆಕ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT