ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌: ವಿಶೇಷ ಕೊಡುಗೆ

Last Updated 31 ಮೇ 2020, 16:54 IST
ಅಕ್ಷರ ಗಾತ್ರ

ಬೆಂಗಳೂರು: ವಾಹನ ತಯಾರಿಕೆಯ ಪ್ರಮುಖ ಕಂಪನಿ ಟಾಟಾ ಮೋಟರ್ಸ್‌, ವಾಹನಗಳ ಖರೀದಿಗೆ ಸುಲಭ ಹಣಕಾಸು ಸೌಲಭ್ಯ, ಕಡಿಮೆ ಮೊತ್ತದ ಮಾಸಿಕ ಸಮಾನ ಕಂತು (ಇಎಂಐ), ದೀರ್ಘಾವಧಿಯ ಸಾಲ ಕೊಡುಗೆಗಳನ್ನು ಪರಿಚಯಿಸಿದೆ.

ತನ್ನ ಡೀಲರ್‌ ಪಾಲುದಾರರ ಸಹಯೋಗದಲ್ಲಿ ಈ ಕೊಡುಗೆಗಳನ್ನು ಪರಿಚಯಿಸಿದೆ. ಸೋಮವಾರದಿಂದ (ಜೂನ್‌ 1) ಈ ಕೊಡುಗೆಗಳು ವಾಹನ ಖರೀದಿದಾರರಿಗೆ ಲಭ್ಯವಾಗಲಿವೆ.

ನಗರದಲ್ಲಿನ ಪ್ರೇರಣಾ ಮೋಟರ್ಸ್‌, ಕೆಎಚ್‌ಟಿ ಮೋಟರ್ಸ್‌, ಕೀ ಮೋಟರ್ಸ್‌, ಕ್ರೊಪೆಕ್ಸ್ ಆಟೊ ಮತ್ತು ಆದಿಶಕ್ತಿ ಕಾರ್ಸ್‌ ಡೀಲರ್‌ಗಳಲ್ಲಿ ಈ ವಿಶೇಷ ಕೊಡುಗೆಗಳನ್ನು ಗ್ರಾಹಕರು ಪಡೆದುಕೊಳ್ಳಬಹುದು.

ಕಾರ್‌, ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಖರೀದಿಗೆ ಶೇ 100ರಷ್ಟು (ಆನ್‌ ರೋಡ್‌) ಹಣಕಾಸು ನೆರವು ಒದಗಿಸಲಿದೆ. ಗ್ರಾಹಕರು ಎಂಟು ವರ್ಷಗಳ ಮರುಪಾವತಿ ಸೌಲಭ್ಯ ಪಡೆದುಕೊಂಡು ಕಡಿಮೆ ‘ಇಎಂಐ’ ಬಳಸಿಕೊಳ್ಳಬಹುದಾಗಿದೆ.

ವಿಶೇಷ ರಿಯಾಯ್ತಿ: ‘ಕೋವಿಡ್‌ ನಿಯಂತ್ರಿಸಲು ಮುಂಚೂಣಿಯಲ್ಲಿ ಇರುವ ವೈದ್ಯರು, ಪೊಲೀಸರು ಹಾಗೂ ಅಗತ್ಯ ಸೇವೆಗಳ ಸಮರ ಸೇನಾನಿಗಳಿಗೆ ಹಣಕಾಸು ರಿಯಾಯ್ತಿಯ ವಿಶೇಷ ಕೊಡುಗೆ ನೀಡಲಿದೆ. ಆಲ್ಟ್ರೋಝ್‌ ಹೊರತುಪಡಿಸಿ ಉಳಿದೆಲ್ಲ ಕಾರ್‌ ಮತ್ತು ಎಸ್‌ಯುವಿಗಳ ಖರೀದಿಯಲ್ಲಿ ಇವರಿಗೆ ₹ 45 ಸಾವಿರದವರೆಗೆ ವಿಶೇಷ ಪ್ರಯೋಜನಗಳನ್ನು ಕಲ್ಪಿಸಲಾಗುವುದು’ ಎಂದು ಕಂಪನಿಯ ದಕ್ಷಿಣ ವಲಯದ ಮ್ಯಾನೇಜರ್‌ ಸೂರಜ್‌ ಸುಬ್ಬರಾವ್‌ ಹೇಳಿದ್ದಾರೆ.

ಬೆಳಗಾವಿಯ ಮಾಣಿಕ್‌ಬಾಗ್‌ ಆಟೊಮೊಬೈಲ್‌ ಮತ್ತು ಶಿವಮೊಗ್ಗದ ಆದಿಶಕ್ತಿ ಕಾರ್ಸ್‌ ಡೀಲರ್‌ಗಳಲ್ಲಿಯೂ ಈ ಎಲ್ಲ ಕೊಡುಗೆಗಳು ಲಭ್ಯ ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT