ಗುರುವಾರ , ಮಾರ್ಚ್ 23, 2023
23 °C
ನಿರೀಕ್ಷಿತ ಗುರಿ ಮುಟ್ಟುವಲ್ಲಿ ವಿಫಲ

ಭಾರೀ ನಿರೀಕ್ಷೆ ಹುಟ್ಟಿಸಿದ್ದ ‘ಟಾಟಾ ನಿಯೋ‘ಗೆ ಆರಂಭದ ವರ್ಷದಲ್ಲೇ ಹಿನ್ನಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರೀ ಮಹತ್ವಕಾಂಕ್ಷೆಯಿಂದ ಟಾಟಾ ಸಮೂಹ ಆರಂಭಿಸಿದ್ದ ಸೂಪರ್‌ ಆ್ಯಪ್‌  ‘ಟಾಟಾ ನಿಯೋ‘ಗೆ ಆರಂಭಿಕ ವರ್ಷದಲ್ಲಿ ಹಿನ್ನಡೆಯಾಗಿದೆ. ಅಂದುಕೊಂಡದ್ದಕ್ಕಿಂತ ಅರ್ಧದಷ್ಟು ಮಾತ್ರ ಆದಾಯದ ಗುರಿ ಸಾಧಿಸಲು ಮಾತ್ರ ಸಾಧ್ಯವಾಗಿದೆ ಎಂದು ಈ ಕುರಿತು ಮಾಹಿತಿ ಇರುವವರನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ. 

2022ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ನಿಯೋ ಭಾರೀ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಟಾಟಾ ಸಮೂಹ ಇಟ್ಟುಕೊಂಡಷ್ಟು ಗುರಿಯನ್ನು ತಲುಪಲು ವಿಫಲವಾಗಿದೆ.

2023ರ ಮಾರ್ಚ್‌ ಅಂತ್ಯದ ವೇಳೆಗೆ 8 ಬಿಲಿಯನ್‌ ಡಾಲರ್‌ ಗಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ ಕೇವಲ 4 ಬಿಲಿಯನ್‌ ಡಾಲರ್‌ನಷ್ಟು ಗುರಿ ಸಾಧಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಟಾಟಾದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಈ ಬಗ್ಗೆ ತಿಳಿದಿರುವವರಿಂದ ಮಾಹಿತಿ ಲಭಿಸಿದೆ. ನಿಯೋವನ್ನು ಲಾಭದ ಹಳಿಗೆ ತರಲು ಸಂಸ್ಥೆಯ  ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಪ್ರತೀಕ್‌ ಪಾಟೀಲ್‌ ಹೆಚ್ಚಿನ ಮುತುವರ್ಜಿ ವಹಿಸಿದ್ದಾರೆ ಎಂದು ಗೊತ್ತಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು