ಟಾಟಾ ಹ್ಯಾರಿಯರ್‌ ಮಾರುಕಟ್ಟೆಗೆ

7

ಟಾಟಾ ಹ್ಯಾರಿಯರ್‌ ಮಾರುಕಟ್ಟೆಗೆ

Published:
Updated:
Prajavani

ಬೆಂಗಳೂರು: ಟಾಟಾ ಮೋಟಾರ್ಸ್‌, 2018ರ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶಿಸಿದ್ದ ಹ್ಯಾರಿಯರ್ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ (ಎಸ್‌ಯುವಿ) ಅನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

‘ಈ ವಾಹನವನ್ನು ಬಿಡುಗಡೆ ಮಾಡುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಎಲ್ಲ ರೀತಿಯ ತಾಪಮಾನಗಳಿಗೆ ಹೊಂದಿಕೊಳ್ಳುವಂತೆ ಇದೆ. ಕಲ್ಲು–ಮಣ್ಣಿನ ರಸ್ತೆಗಳಲ್ಲೂ ಆರಾಮವಾಗಿ ಚಾಲನೆ ಮಾಡಲು ಅನುಕೂಲ ಆಗುವಂತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ’ ಎಂದು ಸಂಸ್ಥೆಯ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೇಟ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ಎಂಜಿನ್ ಮತ್ತು ತಯಾರಿಕಾ ಗುಣಮಟ್ಟ ಸೇರಿದಂತೆ ಹಲವು ವಿಧದಲ್ಲಿ ಸುಧಾರಿತ ತಂತ್ರಜ್ಞಾನ ಒಳಗೊಂಡಿದ್ದು  ದೇಶಿ ಮಾರುಕಟ್ಟೆಯಲ್ಲಿ ಈ ವಾಹನ ಹೊಸ ಛಾಪು ಮೂಡಿಸುವ ನಿರೀಕ್ಷೆ ಇದೆ’ ಎಂದರು.

‘ಮಧ್ಯಮ ಗಾತ್ರದ ಐದು ಆಸನಗಳ ಎಸ್‌ಯುವಿ ವಿಭಾಗದಲ್ಲಿ ಈ ವಾಹನ ಹೊಸ ಬ್ರ್ಯಾಂಡ್‌ ಮೌಲ್ಯ ಸೃಷ್ಟಿಸಲಿದೆ’ ಎಂದು ಸಂಸ್ಥೆಯ ಪ್ರಯಾಣಿಕ ವಾಹನ ತಯಾರಿಕಾ ವಿಭಾಗದ ಮುಖ್ಯಸ್ಥ ವಿವೇಕ್ ಶ್ರೀ ವತ್ಸ ತಿಳಿಸಿದರು.

ಬೆಂಗಳೂರಿನಲ್ಲಿ ಇದರ ಎಕ್ಸ್–ಷೋರೂಂ ಬೆಲೆ ₹ 12.69 ಲಕ್ಷದಿಂದ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !