ನವದೆಹಲಿ: 2025–26ರ ಆರ್ಥಿಕ ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಟಾಟಾ ಸ್ಟೀಲ್ ಕಂಪನಿಯು ₹2,965 ಕೋಟಿಯಷ್ಟು ಲಾಭ ಗಳಿಸಿದೆ.

2024–25ರ ಇದೇ ಅವಧಿಯಲ್ಲಿ ಕಂಪನಿಯು ₹1,201 ಕೋಟಿ ಲಾಭ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣದಲ್ಲಿ ದುಪ್ಪಟ್ಟು ಏರಿಕೆ ಆಗಿದೆ ಎಂದು ಕಂಪನಿ ತಿಳಿಸಿದೆ.

ಕಂಪನಿಯ ಒಟ್ಟು ವರಮಾನವು ₹56,679 ಕೋಟಿಯಿಂದ ₹63,518 ಕೋಟಿಗೆ ಹೆಚ್ಚಳವಾಗಿದೆ. ಇದು ಕಂಪನಿಯ ಲಾಭ ಏರಿಕೆಗೆ ಕಾರಣ ಎಂದು ತಿಳಿಸಿದೆ.

2025–26ರ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯು ₹10,885 ಕೋಟಿ ಲಾಭ ಗಳಿಸಿದ್ದರೆ, ವರಮಾನವು ₹2.33 ಲಕ್ಷ ಕೋಟಿಯಷ್ಟಾಗಿದೆ. 2024–25ರಲ್ಲಿ ಇವು ಕ್ರಮವಾಗಿ ₹3,173 ಕೋಟಿ ಮತ್ತು ₹2.20 ಲಕ್ಷ ಕೋಟಿ ಎಂದು ತಿಳಿಸಿದೆ.

ಕಂಪನಿಯ ಆಡಳಿತ ಮಂಡಳಿ ₹1 ಮುಖಬೆಲೆಯ ಪ್ರತಿ ಈಕ್ವಿಟಿ ಷೇರಿಗೆ ₹4 ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಕಳೆದ ಪೂರ್ಣ ಆರ್ಥಿಕ ವರ್ಷದಲ್ಲಿ ಕಂಪನಿಯು 3.16 ಕೋಟಿ ಟನ್ನಷ್ಟು ಉಕ್ಕು ಉತ್ಪಾದಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.