ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 9,500 ಕೋಟಿಗೆ ಬಿಗ್‌ ಬಾಸ್ಕೆಟ್‌ನ ಶೇ 68ರಷ್ಟು ಷೇರು ಖರೀದಿಸಲಿದೆ ಟಾಟಾ ಸಮೂಹ

Last Updated 17 ಫೆಬ್ರುವರಿ 2021, 15:56 IST
ಅಕ್ಷರ ಗಾತ್ರ

ನವದೆಹಲಿ: ಆನ್‌ಲೈನ್‌ ಮೂಲಕ ದಿನಸಿ ವಸ್ತುಗಳನ್ನು ಮಾರಾಟ ಮಾಡುವ ‘ಬಿಗ್‌ ಬಾಸ್ಕೆಟ್‌’ನ ಶೇಕಡ 68ರಷ್ಟು ಷೇರುಗಳನ್ನು ಟಾಟಾ ಸಮೂಹವು ₹ 9,500 ಕೋಟಿಗೆ ಖರೀದಿಸಲಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಇ–ಕಾಮರ್ಸ್‌ ವಲಯದಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಳ್ಳಲು ಟಾಟಾ ಸಮೂಹ ಈ ಖರೀದಿಗೆ ಮುಂದಾಗಿದೆ ಎಂದು ಗೊತ್ತಾಗಿದೆ.

ಬೆಂಗಳೂರು ಮೂಲದ ‘ಬಿಗ್‌ ಬಾಸ್ಕೆಟ್’ ನವೋದ್ಯಮದಲ್ಲಿ ಹೆಚ್ಚಿನ ಪಾಲು ಹೊಂದಲು ಪ್ರಯತ್ನಿಸುತ್ತಿರುವ ಟಾಟಾ ಸಮೂಹವು ಒಪ್ಪಂದಕ್ಕೆ ಸಹಿ ಮಾಡಿದೆ ಎಂದು ಈ ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ವ್ಯಕ್ತಿಗಳು ತಿಳಿಸಿದ್ದಾರೆ.

ಆಲಿಬಾಬಾ ‌ಸೇರಿದಂತೆ ಹಲವು ಹೂಡಿಕೆದಾರರಿಗೆ ಬಿಗ್‌ಬಾಸ್ಕೆಟ್‌ನಿಂದ ಹೊರಹೋಗಲು ಈ ಒಪ್ಪಂದವು ಅವಕಾಶ ಕಲ್ಪಿಸಲಿದೆ. ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯೆ ನೀಡಲು ಟಾಟಾ ಸಮೂಹ, ಬಿಗ್‌ ಬಾಸ್ಕೆಟ್‌ ಮತ್ತು ಆಲಿಬಾಬಾ ನಿರಾಕರಿಸಿವೆ.

2019ರಲ್ಲಿ ಮಿರೈ, ಅಲಿಬಾಬಾ ಮತ್ತು ಸಿಡಿಸಿ ಸಮೂಹದಿಂದ ₹ 1,095 ಕೋಟಿ ಬಂಡವಾಳವನ್ನು ಬಿಗ್‌ಬಾಸ್ಕೆಟ್‌ ಸಂಗ್ರಹಿಸಿತ್ತು.

ವರದಿಗಳ ಪ್ರಕಾರ, ಬಿಗ್‌ ಬಾಸ್ಕೆಟ್‌ ಸಹ ಸ್ಥಾಪಕ ಹರಿ ಮೆನನ್‌ ಅವರನ್ನೂ ಒಳಗೊಂಡು ಆಡಳಿತ ಮಂಡಳಿಯ ಉನ್ನತ ಹುದ್ದೆಗಳಲ್ಲಿ ಇರುವವರು ಮುಂದಿನ ಮೂರರಿಂದ ನಾಲ್ಕು ವರ್ಷಗಳವರೆಗೆ ಕಂಪನಿಯಲ್ಲಿ ಮುಂದುವರಿಯಲಿದ್ದಾರೆ. ಆದರೆ, ಈ ಕುರಿತು ಮೆನನ್‌ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT