ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ಗೊಂದಲ ಬೇಡ

Last Updated 13 ಆಗಸ್ಟ್ 2019, 19:30 IST
ಅಕ್ಷರ ಗಾತ್ರ

ಅಂದಾಜು (ಅಸೆಸ್‌ಮೆಂಟ್) ವರ್ಷ 2019–20ರ ಅವಧಿಯಲ್ಲಿ ಆದಾಯ ತೆರಿಗೆ ಕೊಡಲು ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್‌ನಲ್ಲಿ ನಿಗದಿಪಡಿಸಿರುವ ಮಿತಿ ಹಾಗೂ ಐ.ಟಿ ರಿಟರ್ನ್ಸ್‌ ಸಲ್ಲಿಕೆ ವಿಚಾರದಲ್ಲಿ ಇರುವ ಗೊಂದಲಕ್ಕೆ ವಿವರಣೆ ಇಲ್ಲಿದೆ.

2019–29ರಲ್ಲಿ ಎಲ್ಲಾ ವರ್ಗದ ಜನರಿಗೆ ಆದಾಯ ತೆರಿಗೆ ಕೊಡಲು ಇರುವ ವಾರ್ಷಿಕ ಆದಾಯದ ಮಿತಿ₹ 5 ಲಕ್ಷ (ಇದರಲ್ಲಿ ಸೀನಿಯರ್, ಸೂಪರ್ ಸೀನಿಯರ್, ಇತರರು) ಎನ್ನುವ ಭೇದವಿಲ್ಲ.

ಯಾವುದೇ ವ್ಯಕ್ತಿಯ ಒಟ್ಟು ವಾರ್ಷಿಕ ಆದಾಯ (Gross Total Income) ಬೇರೆ ಬೇರೆ ಸೆಕ್ಷನ್‌ಗಳ ಆಧಾರದ ಮೇಲೆ (ಉದಾ: ಸೆಕ್ಷನ್‌ 80C, 80CED (1B), 80D, 80E, 24 (a), 24 (B), 80TTA -80TTB ಮೊದಲಾದವು) ಪಡೆಯುವ ವಿನಾಯ್ತಿಯು ಒಟ್ಟು ಆದಾಯದಿಂದ ಕಳೆದಾಗ ಬರುವ ಮೊತ್ತ₹ 5 ಲಕ್ಷದೊಳಗೆ ಇರುವಲ್ಲಿ ಆ ವ್ಯಕ್ತಿ ಆದಾಯ ತೆರಿಗೆ ಕೊಡುವ ಅವಶ್ಯವಿಲ್ಲ. ವಿನಾಯ್ತಿ ಪಡೆಯದೆ ಕೂಡಾ ವಾರ್ಷಿಕ ಆದಾಯವು ₹ 5 ಲಕ್ಷದೊಳಗೆ ಇದ್ದರೆ ತೆರಿಗೆ ಕೊಡುವ ಅವಶ್ಯವಿಲ್ಲ.

ಆರ್ಥಿಕ ವರ್ಷದ ಅವಧಿಯಲ್ಲಿ ವಿನಾಯ್ತಿ ಪಡೆದು ಅಥವಾ ಪಡೆಯದೆ₹ 5 ಲಕ್ಷ ಮಿತಿ ದಾಟಿದಲ್ಲಿ, ಇಂತಹ ವ್ಯಕ್ತಿಗಳಿಗೆ₹ 5 ಲಕ್ಷದ ಮಿತಿ ಅನ್ವಯಿಸುವುದಿಲ್ಲ. ಇವರು ಹಿಂದಿನಂತೆ₹ 2.50,₹ 3 ಲಕ್ಷ ಹಾಗೂ₹ 5 ಲಕ್ಷ ಮಿತಿಯನ್ನೆ ಅನುಸರಿಸಿ ತೆರಿಗೆ ಸಲ್ಲಿಸಬೇಕಾಗುತ್ತದೆ.

ಐ.ಟಿ ರಿಟರ್ನ್ಸ್‌ ಯಾರು ತುಂಬಬೇಕು?

ಹಿರಿಯ ನಾಗರಿಕರು, ಸೂಪರ್ ಸೀನಿಯರ್ ಹಾಗೂ ಇತರರು ಕ್ರಮವಾಗಿ₹ 3 ಲಕ್ಷ ,₹ 5 ಲಕ್ಷ ಹಾಗೂ₹ 2.50 ಲಕ್ಷ ವಾರ್ಷಿಕ ಆದಾಯದ ಮಿತಿ ದಾಟಿದಲ್ಲಿ ಆದಾಯ ತೆರಿಗೆಗೆ ಒಳಗಾಗಲೀ ಅಥವಾ ಒಳಗಾಗದೇ ಇರಲಿ ತಮ್ಮ ವಾರ್ಷಿಕ ಆದಾಯದ ಲೆಕ್ಕಪತ್ರ ವಿವರ (ಐ.ಟಿ ರಿಟರ್ನ್‌) ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT